March 19, 2026
Thursday, March 19, 2026
spot_img

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಭಾರತದ ಮೌನವೇ ಭೂಷಣ! ‘ನಮೋ’ ಸರ್ಕಾರಕ್ಕೆ ‘ಕೈ’ ಸಂಸದ ಜೈಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಕೇಂದ್ರ ಸರ್ಕಾರದ ‘ತಟಸ್ಥ’ ನಿಲುವನ್ನು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಬೆಂಬಲಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಪ್ರಧಾನಿ ಮೋದಿ ಸರ್ಕಾರದ ವಿದೇಶಾಂಗ ನೀತಿಗಳನ್ನು ಟೀಕಿಸುವ ಕಾಂಗ್ರೆಸ್ ನಾಯಕರ ನಡುವೆ, ತಿವಾರಿ ಅವರ ಈ ಸಮರ್ಥನೆ ಗಮನಾರ್ಹವಾಗಿದೆ.

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಭಾರತವು ಯಾವುದೇ ಒಂದು ದೇಶದ ಪರ ವಹಿಸದೆ ಮೌನವಾಗಿರುವುದು ಮತ್ತು ಎಚ್ಚರಿಕೆಯ ಹೆಜ್ಜೆ ಇಡುತ್ತಿರುವುದು ಸರಿಯಾದ ಕ್ರಮ ಎಂದು ತಿವಾರಿ ಹೇಳಿದ್ದಾರೆ.

ಈ ಬಿಕ್ಕಟ್ಟಿನ ಸಂಕೀರ್ಣತೆಯನ್ನು ವಿವರಿಸಿದ ಅವರು, “ಇದು ನಮ್ಮ ಯುದ್ಧವಲ್ಲ, ಹಾಗಾಗಿ ನಾವು ಇದರಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಮಧ್ಯಪ್ರಾಚ್ಯದ ವಿಷಯದಲ್ಲಿ ಭಾರತವು ಮೊದಲಿನಿಂದಲೂ ಸೀಮಿತ ಪಾತ್ರವನ್ನೇ ವಹಿಸುತ್ತಾ ಬಂದಿದೆ. ಈಗಿನ ರಾಜತಾಂತ್ರಿಕ ವಿಧಾನವು ಆ ಇತಿಹಾಸಕ್ಕೆ ಪೂರಕವಾಗಿದೆ ಎಂಬುದು ಅವರ ಅಭಿಪ್ರಾಯ.

ಒಂದು ಕಡೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಸರ್ಕಾರದ ನಡೆಯನ್ನು ಪ್ರಶ್ನಿಸುತ್ತಿದ್ದರೆ, ತಿವಾರಿ ಅವರು ದೇಶದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !