March 19, 2026
Thursday, March 19, 2026
spot_img

ಎಲೆಕ್ಷನ್ ಬಿಝ್ಯಿಯಲ್ಲಿ ಕಾಸರಗೋಡು: ಈ ಬಾರಿ ಹೆಣ್ಮಕ್ಕಳೇ ಇಲ್ಲಿ ಜಿಲ್ಲೆಯ ಭವಿಷ್ಯದ ನಿರ್ಣಾಯಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭಾ ಚುನಾವಣೆಗೆ ಕಾಸರಗೋಡು ಜಿಲ್ಲೆ ಸರ್ವ ರೀತಿಯಲ್ಲಿ ಸಜ್ಜಾಗುತ್ತಿದ್ದು, ಈ ಬಾರಿ ಇಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದರೆ.


ಚುನಾವಣಾ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್, ಅಂಕಿಅಂಶಗಳ ಸಹಿತ ಮಾಹಿತಿ ನೀಡಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಈ ಬಾರಿ ಹಕ್ಕು ಚಲಾಯಿಸಲು 11,00,036 ಮಂದಿ ಅರ್ಹರಾಗಿದ್ದಾರೆ. ಈ ಪೈಕಿ 5,57,163 ಮಹಿಳೆಯರು ಹಾಗೂ 5,42,861 ಪುರುಷರು. 12 ಮಂದಿ ಇತರೆ ಮತದಾರರಿದ್ದಾರೆ. ಮಾರ್ಚ್ 16 ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಮಾ. 23 ಆಗಿದ್ದು, ಮಾ. 24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮಾ. 26 ರವರೆಗೆ ಅವಕಾಶವಿದೆ. ಏ. 9 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ, ಮೇ 4ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಪ್ರಕ್ರಿಯೆ ಅಧಿಕೃತವಾಗಿ ಮೇ 6 ರಂದು ಕೊನೆಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 1141 ಮತಗಟ್ಟೆ ಸ್ಥಾಪಿಸಲಾಗುತ್ತದೆ. ಈ ಪೈಕಿ ಮಂಜೇಶ್ವರ – 229, ಕಾಸರಗೋಡು – 218, ಉದುಮ – 237, ಕಾಞಂಗಾಡ್ – 239, ತ್ರಿಕರಿಪುರ – 218 ಮತಗಟ್ಟೆ ಇರಲಿವೆ. ಎಲ್ಲೆಡೆ ಸುಗಮ ಮತದಾನಕ್ಕಾಗಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !