ಹೊಸದಿಗಂತ ಡಿಜಿಟಲ್ ಡೆಸ್ಕ್:
BMTC ಚಾಲಕನೊಬ್ಬ ಮದ್ಯಪಾನ ಮಾಡಿ ಬಸ್ ಚಲಾಯಿಸುವ ಮೂಲಕ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮಾ. 18ರ ರಾತ್ರಿ ಸುಮಾರು 7:30ರ ಸಮಯದಲ್ಲಿ ನಗರದ ಟಿನ್ ಫ್ಯಾಕ್ಟರಿ ಸಮೀಪ ಈ ಘಟನೆ ಸಂಭವಿಸಿದೆ. ಬಿಎಂಟಿಸಿ ಬಸ್ ಚಾಲಕ ಮದ್ಯದ ಅಮಲಿನಲ್ಲಿ ರಸ್ತೆಯ ಉದ್ದಕ್ಕೂ ಬಸ್ಸನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದ ಎನ್ನಲಾಗಿದೆ.
ಚಾಲಕನ ಅಪಾಯಕಾರಿ ಚಾಲನೆಯನ್ನು ಕಂಡು ಆತಂಕಗೊಂಡ ಮಹಿಳಾ ಪ್ರಯಾಣಿಕರೊಬ್ಬರು ಬಸ್ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಕ್ಷಮೆಯಾಚಿಸುವ ಬದಲು ಚಾಲಕ ಮಹಿಳೆಯ ಜೊತೆಯೇ ಉದ್ಧಟತನದಿಂದ ವಾಗ್ವಾದಕ್ಕಿಳಿದಿದ್ದಾನೆ.
ಚಾಲಕನ ಅಸಭ್ಯ ವರ್ತನೆ ಮತ್ತು ಆತ ಮದ್ಯ ಸೇವಿಸಿರುವುದನ್ನು ಗಮನಿಸಿದ ಮಹಿಳೆ ತಕ್ಷಣವೇ ಮೊಬೈಲ್ನಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರು ಬಿಎಂಟಿಸಿ ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.



