November 5, 2026
Thursday, November 5, 2026
spot_img

ಮೊಮ್ಮಗಳ ಮೇಲೆ ಅತ್ಯಾ*ಚಾರ: ಕಾಮುಕ ಅಜ್ಜ ಅಂದರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯಲ್ಲೊಂದು ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಆರು ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ 58 ವರ್ಷದ ಅಜ್ಜನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಮಾರ್ಚ್ 17ರಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಬಾಲಕಿಯ ತಾಯಿ ಮನೆಯಲ್ಲಿ ಇರದ ವೇಳೆ ಆರೋಪಿಯು ಕೃತ್ಯ ಎಸಗಿದ್ದಾನೆ. ಇತರ ಕುಟುಂಬ ಸದಸ್ಯರು ಕೆಳಮಹಡಿಯಲ್ಲಿ ಇದ್ದರು. ಬೆಳಿಗ್ಗೆ ಸುಮಾರು ಐದು ಗಂಟೆ ವೇಳೆಗೆ ಬಾಲಕಿಯ ಕಿರುಚಾಟ ಕೇಳಿ ಮೇಲ್ಮಹಡಿಗೆ ಧಾವಿಸಿದ ಕುಟುಂಬದವರು, ಅಜ್ಜನು ಬಾಲಕಿಯ ಮೇಲೆ ದೌರ್ಜನ್ಯ ನಡೆಸುತ್ತಿರುವುದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ:

ತಕ್ಷಣ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೇ ವೇಳೆ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದಾನೆ. ಬಾಲಕಿಯ ಆರೋಗ್ಯ ಸ್ಥಿತಿ ಸ್ವಲ್ಪ ಸುಧಾರಿಸಿದ ಬಳಿಕ, ಬಾಲಕಿಯ ತಂದೆಯು ತನ್ನ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ಆಧಾರಿಸಿ ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಧಿಗಳು ಹಾಗೂ ಮಕ್ಕಳ ರಕ್ಷಣೆಯ ವಿಶೇಷ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಂತರ ಬಂಧನ ತಪ್ಪಿಸಲು ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ಸುಳಿವಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

Must Read