September 18, 2026
Friday, September 18, 2026
spot_img

ಒಂದೇ ದಿನ ಬರೋಬ್ಬರಿ 10.73 ಲಕ್ಷ ಜನರ ಪ್ರಯಾಣ: ಹೊಸ ದಾಖಲೆ ಬರೆದ ‘ನಮ್ಮ ಮೆಟ್ರೋ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದೇ ದಿನ ಬರೋಬ್ಬರಿ 10.73 ಲಕ್ಷ ಪ್ರಯಾಣಿಕರನ್ನು ಕರೆದೊಯ್ಯುವ ಮೂಲಕ ಱನಮ್ಮ ಮೆಟ್ರೋೞ ತನ್ನ ಕಳೆದ 15 ವರ್ಷಗಳ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದಿದೆ.

ಮೆಟ್ರೋ ಮೂಲಗಳ ಮಾಹಿತಿ ಪ್ರಕಾರ ಮಾ.18ರಂದು ಬರೋಬ್ಬರಿ 10.73 ಲಕ್ಷ ಮಂದಿ ಪ್ರಯಾಣಿಸಿದ್ದು, ಯುಗಾದಿ, ರಂಜಾನ್ ಹಬ್ಬದ ಜೊತೆಗೆ ಸಾಲು ಸಾಲು ನಾಲ್ಕು ದಿನಗಳ ರಜೆ ಇದಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ.

ಈ ಪೈಕಿ 4 ಲಕ್ಷಕ್ಕೂ ಹೆಚ್ಚು ಜನರು ಸ್ಮಾರ್ಟ್‌ಕಾರ್ಡ್ ಬಳಸುವ ಮೂಲಕ ಸರತಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿಯಿಂದ ಮುಕ್ತಿ ಪಡೆದು ಸರಳವಾಗಿ ಪ್ರಯಾಣ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !