March 21, 2026
Saturday, March 21, 2026
spot_img

ರಾಜ್ಯದ ಜನತೆಗೆ ಗುಡ್ ನ್ಯೂಸ್: ಮಂಗಳೂರು ಬಂದರಿಗೆ ಬಂತು ರಷ್ಯಾದಿಂದ ತೈಲ ಹೊತ್ತು ಹೊರಟ ಬೃಹತ್ ಹಡಗು!

ಹೊಸ ದಿಗಂತ ವರದಿ ಮಂಗಳೂರು:

ಅಂತೂ ಇಂತೂ ಮಂಗಳೂರು ಬಂದರಿಗೊಂದು ಬೃಹತ್ ಹಡಗು ಬಂದಿದೆ. ಶನಿವಾರ ರಾತ್ರಿ ಕಚ್ಛಾ ತೈಲ ಹೊತ್ತು ಬಂದ ಈ ಹಡಗಿನಿಂದಾಗಿ ಕರಾವಳಿಯ ಮಂದಿ ನಿಟ್ಟುಸಿರು ಬಿಡುವಂತಾಗಿದೆ. ದೇಶದ ಇಂಧನ ಬೇಡಿಕೆ ಪೂರೈಸುವಲ್ಲಿ ಮಂಗಳೂರಿಗೆ ಬಂದ ಬೃಹತ್ ತೈಲ ಮಹತ್ತರ ಪಾತ್ರ ವಹಿಸಲಿದೆ.

ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವೆ ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ಅಕ್ವಾ ಟೈಟಾನ್ ಹೆಸರಿನ ಕಚ್ಛಾ ತೈಲ ಹೊತ್ತ ಬೃಹತ್ ಹಡಗು ಮಂಗಳೂರು ಬಂದರಿಗೆ ಆಗಮಿಸಿದ್ದು, ಇದರಿಂದ ಸುಮಾರು 96 ಸಾವಿರ ಮೆಟ್ರಿಕ್ ಟನ್ ನಷ್ಟು ಕಚ್ಛಾ ತೈಲವನ್ನು ಎಂಆರ್‌ಪಿಎಲ್ ತೈಲ ಸಂಸ್ಕರಣಾ ಘಟಕಕ್ಕೆ ಅನ್‌ಲೋಡ್ ಮಾಡಲಾಗುತ್ತಿದೆ.

ಈ ಸರಕು ಹಡಗು ಜನವರಿ ಅಂತ್ಯದ ವೇಳೆಗೆ ರಷ್ಯಾದಲ್ಲಿ ಕಚ್ಛಾ ತೈಲವನ್ನು ಲೋಡ್ ಮಾಡಿಕೊಂಡಿತ್ತು. ಚೀನಾಕ್ಕೆ ತೆರಳುವ ಗುರಿ ಹೊಂದಿದ್ದ ಈ ಹಡಗು ಕಾರಣಾಂತರಗಳಿಂದಾಗಿ ಆಗ್ನೇಯ ಏಷ್ಯಾದ ಜಲ ಪ್ರದೇಶಕ್ಕೆ ಬರುತ್ತಿದ್ದಂತೆ ಈ ಹಡಗಿನ ಪಥ ಬದಲಿಸಲಾಗಿದ್ದು, ಮಂಗಳೂರು ತಲುಪಿದೆ.

ಮಂಗಳೂರು ಬಂದರಿಗಿಂತ ಸ್ವಲ್ಪ ದೂರದಲ್ಲಿ ಸಮುದ್ರ ಮಧ್ಯದಿಂದ ಎಂಆರ್‌ಪಿಎಲ್ ತೈಲ ಶುದ್ಧೀಕರಣ ಘಟಕಕ್ಕೆ ಪೈಪ್‌ಲೈನ್ ಮೂಲಕ ಈ ತೈಲವನ್ನು ಅನ್‌ಲೋಡ್ ಮಾಡಲಾಗುತ್ತದೆ. ಭಾನುವಾರ ಬೆಳಗ್ಗೆ ಈ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಪ್ರಕ್ರಿಯೆ ಮುಗಿಯಲು ಒಂದು- ಒಂದೂವರೆ ದಿನ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !