September 30, 2026
Wednesday, September 30, 2026
spot_img

ರಾಜ್ಯಸಭಾ ಚುನಾವಣೆಗೆ ಅಡ್ಡ ಮತದಾನ: 6 ಬಿಜೆಡಿ ಶಾಸಕರ ಅಮಾನತು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯ ವೇಳೆ ಒಡಿಶಾದ ಬಿಜು ಜನತಾದಳ ಪಕ್ಷದ 6 ಶಾಸಕರು ಅಡ್ಡ ಮತದಾನ ನಡೆಸಿದ್ದು, ಇದರಿಂದ ಪಕ್ಷದ ನಿರ್ದೇಶನಗಳನ್ನು ಉಲ್ಲಂಘಿಸಿದ ಆರೋಪದಡಿ ಅವರನ್ನು ಅಮಾನತುಗೊಳಿಸಲಾಗಿದೆ.

ಪಕ್ಷದ ನಿಮಯಗಳಿಗೆ ವಿರುದ್ಧ ಈ ಶಾಸಕರು ನಡೆದುಗೊಂಡಿದ್ದು, ಈ ಹಿನ್ನೆಲೆ ಶೋಕಾಸ್ ನೊಟೀಸ್ ನೀಡಲಾಗಿತ್ತು. ಮಾರ್ಚ್ 20 ರೊಳಗೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ತಿಳಿಸಿತ್ತು. ಆದರೆ ಬಿಜೆಡಿ ಶಿಸ್ತು ಸಮಿತಿಗೆ ನೀಡಿದ ಉತ್ತರ ತೃಪ್ತಿ ನೀಡದ ಹಿನ್ನೆಲೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಬಲಿಗುಡದ ಶಾಸಕ ಚಕ್ರಮಣಿ ಕನ್ಹಾರ್, ಜಯದೇವ್‌ನ ಶಾಸಕ ನಬಾ ಕಿಶೋರ್ ಮಲ್ಲಿಕ್, ಚೌದ್ವಾರ-ಕಟಕ್‌ನ ಶಾಸಕ ಸೌವಿಕ್ ಬಿಸ್ವಾಲ್, ಬಸ್ತಾದ ಶಾಸಕ ಸುಬಾಸಿನಿ ಜೆನಾ, ತಿರ್ಟೋಲ್‌ನ ಶಾಸಕ ರಮಾಕಾಂತ ಭೋಯ್,ಬಂಕಿಯ ಶಾಸಕ ದೇವಿ ರಂಜನ್ ತ್ರಿಪಾಠಿ ಅಮಾನತುಗೊಂಡವರಾಗಿದ್ದಾರೆ .

ರಾಜ್ಯಸಭೆಯ 37 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಕೂಟವು 30 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ141ಸ್ಥಾನಗಳನ್ನು ಹೆಚ್ಚಿಸಿದೆ. INDIA ಕೂಟವು 6 ಸ್ಥಾನಗಳಲ್ಲಿ ಜಯಗಳಿಸಿದ್ದು, ಬಲವನ್ನು 75ಕ್ಕೆ ಏರಿಸಿಕೊಂಡಿದೆ.

Must Read