ಹೊಸದಿಗಂತ ಡಿಜಿಟಲ್ ಡೆಸ್ಕ್:
ಧುರಂಧರ್ 2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲೇ 300 ಕೋಟಿ ರೂಪಾಯಿ ಗಡಿ ದಾಟಿ ದಾಖಲೆ ನಿರ್ಮಿಸಿದೆ.
ಪ್ರೀಮಿಯರ್ ಶೋಗಳಿಂದಲೇ ಚಿತ್ರಕ್ಕೆ ಉತ್ತಮ ಆರಂಭ ಸಿಕ್ಕಿದ್ದು, ಮೊದಲ ದಿನವೇ ಸುಮಾರು 43 ಕೋಟಿ ರೂಪಾಯಿ ಸಂಗ್ರಹಿಸಿತು. ಬಳಿಕ ಅಧಿಕೃತ ಬಿಡುಗಡೆಯಾದ ದಿನ 100 ಕೋಟಿ ಗಡಿ ದಾಟಿದ ಚಿತ್ರ, ಎರಡನೇ ದಿನವೂ ಉತ್ತಮ ವೇಗ ಕಾಯ್ದುಕೊಂಡಿತು. ಮೂರನೇ ದಿನದಲ್ಲಿ ಕೂಡ ಭರ್ಜರಿ ಗಳಿಕೆ ಸಾಧಿಸಿದ್ದು, ಒಟ್ಟು ಕಲೆಕ್ಷನ್ 300 ಕೋಟಿಗೂ ಅಧಿಕವಾಗಿದೆ ಎಂದು ವರದಿಯಾಗಿದೆ.
ಟಿಕೆಟ್ ದರ ಏರಿಕೆಯ ನಡುವೆಯೂ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುಗಿಬಿದ್ದು ಬರುತ್ತಿರುವುದು ವಿಶೇಷ. ಕೆಲವರು ಚಿತ್ರವನ್ನು ಟೀಕಿಸಿದರೂ, ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಅಭಿಪ್ರಾಯಗಳು ಕಂಡರೂ, ಕಲೆಕ್ಷನ್ ಮೇಲೆ ಅದರ ಪರಿಣಾಮ ಕಡಿಮೆಯೇ ಇದೆ.
ಇದನ್ನೂ ಓದಿ:
ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಮ್ಪಾಲ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರ ನಿರ್ದೇಶನ ಚಿತ್ರಕ್ಕೆ ಮತ್ತಷ್ಟು ಬಲ ನೀಡಿದೆ.
ಬಿಡುಗಡೆಯಿಗೂ ಮುನ್ನವೇ ವಿವಾದಕ್ಕೀಡಾದ ಈ ಸಿನಿಮಾ ಕುರಿತು ಪ್ರೊಪೊಗಾಂಡ ಆರೋಪಗಳೂ ಕೇಳಿಬಂದಿವೆ. ಆದರೂ ಪ್ರೇಕ್ಷಕರ ಕುತೂಹಲ ಕಡಿಮೆಯಾಗದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.



