November 4, 2026
Wednesday, November 4, 2026
spot_img

ದೇವಾಲಯದಲ್ಲಿ ಅತ್ಯಾಚಾರ ಹೇಳಿಕೆ ಕಾಂಟ್ರವರ್ಸಿ: ನೇಹಾ ಬೋರಾ ವಿರುದ್ಧ ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇವಾಲಯದಲ್ಲಿ ಅರ್ಚಕರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ ಎಂದು ಕಾಂಟ್ರವರ್ಶಿಯಲ್‌ ಹೇಳಿಕೆ ನೀಡಿರುವ ಅಖಿಲ ಭಾರತ ವಿದ್ಯಾರ್ಥಿ ಸಂಘದ ಸದಸ್ಯೆ ನೇಹಾ ಬೋರಾ ವಿರುದ್ಧ ದೆಹಲಿಯಲ್ಲಿ ಪೊಲೀಸ್‌ ದೂರು ದಾಖಲಾಗಿದೆ.

ದೆಹಲಿ ಹೈಕೋರ್ಟ್‌ನ ಮಹಿಳಾ ವಕೀಲೆ ಅಮಿತಾ ಸಚ್‌ದೇವ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ದೂರು ಸಲ್ಲಿಸಿದ್ದು, ಹೇಳಿಕೆ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ನೇಹಾ ಬೋರಾ ಹೇಳಿಕೆ ಧಾರ್ಮಿಕ ಸಮುದಾಯಕ್ಕೆ ಧಕ್ಕೆ ಮಾಡುವಂಥದ್ದಾಗಿದೆ. ಸಾಮಾಜಿಕ ಸಾಮರಸ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಪಿಸಿದ್ದಾರೆ.

ಭಾರತೀಯ ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ನೀಡಿದೆ. ಆದರೆ, ಇತರ ಸಮುದಾಯಗಳ ಭಾವನೆ ಮತ್ತು ಘನತೆಯನ್ನು ಗೌರವಿಸುವುದರೊಂದಿಗೆ ಈ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಬೇಕು ಎಂದು ಹೇಳಿದ್ದಾರೆ.
ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಗುಂಪಿನ ವಿರುದ್ಧ ಆರೋಪ ಮಾಡುವ ಮೊದಲು ಅದರ ಹಿಂದಿರುವ ಸತ್ಯಾಂಶ ಮತ್ತು ಸಂದರ್ಭಗಳನ್ನು ಪರಿಗಣಿಸಬೇಕು ಎಂಬುದು ಅವರ ವಾದವಾಗಿದೆ.

Must Read