March 22, 2026
Sunday, March 22, 2026
spot_img

ಹಾರ್ಮುಜ್ ಜಲಸಂಧಿ ಹಗ್ಗಜಗ್ಗಾಟ: ಇರಾನ್‌ಗೆ ಅಮೆರಿಕದ ಅಂತಿಮ ಎಚ್ಚರಿಕೆ, 48 ಗಂಟೆಗಳ ಡೆಡ್‌ಲೈನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ತೈಲ ಪೂರೈಕೆಯ ಜೀವನಾಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ ಈಗ ಅಮೆರಿಕ ಮತ್ತು ಇರಾನ್ ನಡುವಿನ ಕೆಂಡಾಮಂಡಲ ಜಗಳಕ್ಕೆ ಸಾಕ್ಷಿಯಾಗಿದೆ.

ಹಾರ್ಮುಜ್ ಜಲಸಂಧಿಯನ್ನು ಮುಂದಿನ 48 ಗಂಟೆಗಳೊಳಗೆ ಹಡಗು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಗಡುವು ನೀಡಿದ್ದಾರೆ. ಒಂದು ವೇಳೆ ಈ ಆದೇಶ ಉಲ್ಲಂಘಿಸಿದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ಧ್ವಂಸಗೊಳಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ.

ಅತ್ತ ಟ್ರಂಪ್ ಬೆದರಿಕೆಗೆ ಕಿಂಚಿತ್ತೂ ತಲೆಬಾಗದ ಇರಾನ್ ಸೇನೆ, ಅಮೆರಿಕಕ್ಕೆ ಪ್ರಬಲ ತಿರುಗೇಟು ನೀಡಿದೆ. “ನಮ್ಮ ಇಂಧನ ಮೂಲಸೌಕರ್ಯಗಳ ಮೇಲೆ ಕೈ ಇಟ್ಟರೆ, ಈ ಪ್ರದೇಶದಲ್ಲಿರುವ ಅಮೆರಿಕದ ಎಲ್ಲಾ ಇಂಧನ ಕೇಂದ್ರಗಳು, ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಮತ್ತು ಉಪ್ಪುನೀರು ಶುದ್ಧೀಕರಣ ಘಟಕಗಳನ್ನು ನಾವು ಟಾರ್ಗೆಟ್ ಮಾಡಿ ಹೊಡೆಯುತ್ತೇವೆ” ಎಂದು ಇರಾನ್‌ನ ಮಿಲಿಟರಿ ಕಮಾಂಡ್ ‘ಖತಮ್ ಅಲ್-ಅನ್ಬಿಯಾ’ ಎಚ್ಚರಿಸಿದ್ದಾರೆ.

ವಿಶ್ವದ ಒಟ್ಟು ತೈಲ ಸಾಗಣೆಯ ಶೇ. 20 ರಷ್ಟು ಭಾಗ ಈ ಮಾರ್ಗದ ಮೂಲಕವೇ ಸಾಗುವುದರಿಂದ, ಪ್ರಸ್ತುತ ಉಂಟಾಗಿರುವ ಬಿಕ್ಕಟ್ಟು ಜಾಗತಿಕ ತೈಲ ಮಾರುಕಟ್ಟೆಯನ್ನು ಅಸ್ಥಿರಗೊಳಿಸಿದ್ದು, ಪೆಟ್ರೋಲ್-ಡೀಸೆಲ್ ದರ ಏರಿಕೆಯ ಭೀತಿ ಎದುರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !