ಊಟದ ಜೊತೆಗೆ ಏನಾದ್ರೂ ರುಚಿಕರವಾದ, ಸ್ವಲ್ಪ ಸ್ಪೆಷಲ್ ಸೈಡ್ ಡಿಷ್ ಇದ್ದರೆ ಊಟದ ಮಜಾ ಇನ್ನೂ ಹೆಚ್ಚಾಗುತ್ತದೆ. ವಿಶೇಷವಾಗಿ ಸಸ್ಯಾಹಾರಿಗಳಿಗೆ ಹಲಸಿನ ಕಬಾಬ್ ಒಳ್ಳೆಯ ಆಯ್ಕೆ.
ಬೇಕಾಗುವ ಪದಾರ್ಥಗಳು:
ಹಲಸಿನ ಕಾಯಿ – 1 ಕಪ್
ಕಡಲೆಹಿಟ್ಟು – 1/4 ಕಪ್
ಅಕ್ಕಿಹಿಟ್ಟು ಅಥವಾ ಕಾರ್ನ್ ಫ್ಲೋರ್ – 1/2 ಕಪ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಖಾರದ ಪುಡಿ – 2 ಚಮಚ
ಗರಂ ಮಸಾಲ – 1/2 ಚಮಚ
ಅರಿಶಿನ – ಒಂದು ಚಿಟಿಕೆ
ಮೊಸರು – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕರಿಬೇವಿನ ಎಲೆ – ಸ್ವಲ್ಪ
ಎಣ್ಣೆ – ಕರಿಯಲು
ಮಾಡುವ ವಿಧಾನ:
ಹಲಸಿನ ಕಾಯಿಯ ಸಿಪ್ಪೆ ತೆಗೆದು, ಚಿಕ್ಕ ತುಂಡುಗಳಾಗಿ ಕತ್ತರಿಸಿ. ಉಪ್ಪು ಮತ್ತು ಅರಿಶಿನ ಹಾಕಿ ಕುಕ್ಕರ್‌ನಲ್ಲಿ 1–2 ವಿಷಲ್ ಬರುವವರೆಗೆ ಬೇಯಿಸಿಕೊಳ್ಳಿ (ತುಂಬಾ ಮೆತ್ತಗಾಗಬಾರದು).
ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಖಾರದ ಪುಡಿ, ಗರಂ ಮಸಾಲ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೊಸರು ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಸ್ವಲ್ಪ ನೀರು ಸೇರಿಸಿ ಗಟ್ಟಿಯಾದ ಮಿಶ್ರಣ ತಯಾರಿಸಿ.
ಬೇಯಿಸಿದ ಹಲಸಿನ ತುಂಡುಗಳನ್ನು ಮಸಾಲೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಚೆನ್ನಾಗಿ ಅಂಟಿಕೊಳ್ಳುವಂತೆ 15–20 ನಿಮಿಷ ಬಿಡಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಮಸಾಲೆ ಹಚ್ಚಿದ ತುಂಡುಗಳನ್ನು ಮಧ್ಯಮ ಉರಿಯಲ್ಲಿ ಗರಿಗರಿಯಾಗಿ, ಕೆಂಪಾಗುವವರೆಗೆ ಕರಿಯಿರಿ.



