March 22, 2026
Sunday, March 22, 2026
spot_img

ಟ್ರಂಪ್ 48 ಗಂಟೆಗಳ ಡೆಡ್ ಲೈನ್ ಗೆ ಸೆಡ್ಡು ಹೊಡೆದ ಇರಾನ್: ಮಿತ್ರರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಮುಕ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ದಿನೇ ದಿನೇ ಭೀಕರ ಸ್ವರೂಪ ಪಡೆಯುತ್ತಿದ್ದು, ಇದರ ನಡುವೆ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ್ದ 48 ಗಂಟೆಗಳ ಡೆಡ್ ಲೈನ್ ಅನ್ನು ತಿರಸ್ಕರಿಸಿದ ಇರಾನ್, ಅಮೆರಿಕ ಮತ್ತು ಇಸ್ರೇಲ್‌ ಬಿಟ್ಟು ಉಳಿದ ಎಲ್ಲಾ ರಾಷ್ಟ್ರಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದೆ.

ಹಾರ್ಮುಜ್ ಜಲಸಂಧಿಯನ್ನು 48 ಗಂಟೆಗಳ ಒಳಗೆ ತೆರೆಯಬೇಕು ಇಲ್ಲವಾದಲ್ಲಿ ಇರಾನ್ ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದು, ಆದರೆ ಇರಾನ್ ತನ್ನ ಶತ್ರು ರಾಷ್ಟ್ರಗಳಿಗೆ ಸೆಡ್ಡು ಹೊಡೆಯುವ ಮೂಲಕ ಉಳಿದ ದೇಶಗಳು ಟೆಹ್ರಾನ್ ಸುರಕ್ಷತೆಯ ಕುರಿತು ಮಾಹಿತಿ ಪಡೆದು ಜಲಸಂಧಿಯಲ್ಲಿ ಹಡಗುಗಳನ್ನು ಸಂಚರಿಸಲು ಅನುಮತಿ ನೀಡಿದೆ.

ಇರಾನ್‌ನ ಅಂತಾರಾಷ್ಟ್ರೀಯ ಸಾಗರ ಸಂಸ್ಥೆ ಪ್ರತಿನಿಧಿ ಅಲಿ ಮೂಸವಿ ಈ ಕುರಿತು ಮಾಹಿತಿ ನೀಡಿದ್ದು, ಸಮುದ್ರದಲ್ಲಿ ಹಡಗುಗಳ ರಕ್ಷಣೆಗೆ ಸಹಕರಿಸಲು ಇರಾನ್ ಸಿದ್ಧವಿದ್ದು, ಇಲ್ಲಿ ನಂಬಿಕೆ ಹಾಗು ವಿಶ್ವಾಸ ಮುಖ್ಯವಾಗಿದೆ . ಆದರೆ ನಾವು ಅಮೆರಿಕ, ಇಸ್ರೇಲ್ ಹಾಗು ಅದರ ನೆರೆ ರಾಷ್ಟ್ರಗಳಿಗೆ ತೈಲ ತಲುಪಲು ಅವಕಾಶ ನೀಡುವುದಿಲ್ಲ ಎಂದು ಖಡಕ್ ಆಗಿ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !