August 30, 2026
Sunday, August 30, 2026
spot_img

ಪಿಂಕ್ ಲೈನ್ ಮೆಟ್ರೋ ಸಂಚಾರಕ್ಕೆ ಕೌಂಟ್‌ಡೌನ್ ಶುರು: ಏಪ್ರಿಲ್‌ನಲ್ಲಿ ಹೈ-ಸ್ಪೀಡ್ ಟೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಮೆಟ್ರೋ ರೈಲು ನಿಗಮ ಪಿಂಕ್ ಲೈನ್‌ನ ಮೊದಲ ಹಂತದ ವಾಣಿಜ್ಯ ಸಂಚಾರಕ್ಕೆ ಭರ್ಜರಿ ತಯಾರಿ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮೇ ತಿಂಗಳಿನಲ್ಲಿ ಈ ಮಾರ್ಗವು ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.

ಏಪ್ರಿಲ್ ಮೊದಲ ವಾರದಲ್ಲಿ ತಜ್ಞರ ತಂಡವು ರೈಲಿನ ವೇಗ, ಲೋಡ್ ಸಾಮರ್ಥ್ಯ, ಟ್ರ‍್ಯಾಕ್ ಗುಣಮಟ್ಟ ಮತ್ತು ವಿದ್ಯುತ್ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಲಿದೆ.

ಈ ವರದಿ ಬಂದ ನಂತರ ರೈಲ್ವೆ ಮಂಡಳಿಯಿಂದ ಅಂತಿಮ ತಾಂತ್ರಿಕ ಸಮ್ಮತಿ ಪಡೆಯಲಾಗುತ್ತದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಅಂತಿಮ ಹಂತದ ಸೇಫ್ಟಿ ಆಡಿಟ್ ನಡೆಸಿದ ಬಳಿಕ ಹಸಿರು ನಿಶಾನೆ ಸಿಗಲಿದೆ.

ಒಟ್ಟು 21.26 ಕಿ.ಮೀ ಉದ್ದದ ಪಿಂಕ್ ಲೈನ್‌ನಲ್ಲಿ ಸದ್ಯಕ್ಕೆ 7.5 ಕಿ.ಮೀ ಉದ್ದದ ಎಲಿವೇಟೆಡ್ ಮಾರ್ಗ ಮಾತ್ರ ಸಂಚಾರಕ್ಕೆ ಲಭ್ಯವಾಗಲಿದೆ.

ನಿಲ್ದಾಣಗಳು: ತಾವರೆಕೆರೆಯಿಂದ ಕಾಳೇನ ಅಗ್ರಹಾರದವರೆಗೆ.

ಉಳಿದ 13 ಕಿ.ಮೀ ಉದ್ದದ ಸುರಂಗ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !