ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದ ಸಂಘರ್ಷಕ್ಕೆ ಜಗತ್ತೇ ತತ್ತರಿಸಿದ್ದು, ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ದದಿಂದ ಹಿಂದೆ ಸರಿಯುವ ಸುಳಿವು ನೀಡಿದ್ದು, ಇದರ ಬೆನ್ನಿಗೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.
ಇಂದು ಬೆಳ್ಳಗೆ ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ 109.91 ಡಾಲರ್ಗೆ ಏರಿಕೆಯಾಗಿತ್ತು. ಸಂಜೆ ವೇಳೆ ಟ್ರಂಪ್ ನೀಡಿದ್ದ ಕದನ ವಿರಾಮದ ಹೇಳಿಕೆ ಬೆನ್ನಲ್ಲೇ ಕಚ್ಚಾ ತೈಲ ಬೆಲೆ 93 ಡಾಲರ್ಗೆ ಇಳಿಕೆಯಾಗಿದೆ . ಈ ಮೂಲಕ ಬರೋಬ್ಬರಿ ಶೇ.11 ರಷ್ಟು ದರದಲ್ಲಿ ಇಳಿಕೆ ಕಂಡಿದೆ.
ಈಗಾಗಲೇ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ ಇರಾನ್ 18 ಕೋಟಿ ರೂ. ಶುಲ್ಕ ವಿಧಿಸುವ ನಿರ್ಧಾರ ತೆಗೆದುಕೊಂಡಿತ್ತು. ಅದ್ರಲ್ಲೂ ಅಮೆರಿಕ, ಇಸ್ರೇಲ್ ಮಿತ್ರ ದೇಶಗಳಿಗೆ ಜಲಸಂಧಿ ಬಳಸಲು ಅನುಮತಿ ನೀಡುವುದಿಲ್ಲ ಎಂದು ಖಡಕ್ ಆಗಿ ತಿಳಿಸಿದೆ.



