March 23, 2026
Monday, March 23, 2026
spot_img

ಟ್ರಂಪ್ ಜೊತೆ ಯಾವ ಮಾತುಕತೆಯೂ ನಡೆದಿಲ್ಲ: ಕದನ ವಿರಾಮ ಹೇಳಿಕೆಗೆ ಇರಾನ್ ತಿರುಗೇಟು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದ ಸಂಘರ್ಷದ ನಡುವೆ ಐದು ದಿನಗಳ ಕದನ ವಿರಾಮ ಘೋಷಿಸುವೆ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಇರಾನ್ ತಿರುಗೇಟು ನೀಡಿದ್ದು, ನಾವು ಯಾವುದೇ ಶಾಂತಿ ಮಾತುಕತೆ ನಡೆಸಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

ಇರಾನ್ ರಾಯಭಾರ ಕಚೇರಿ ಈ ಕುರಿತು ಮಾಹಿತಿ ನೀಡಿದ್ದು, ನಮ್ಮ ದಾಳಿಯ ಎಚ್ಚರಿಕೆಗೆ ಹೆದರಿ ಅಮೆರಿಕ ಈ ಯುದ್ದದಿಂದ ಹಿಂದೆ ಸರಿದಿದೆ. ಒಂದು ವೇಳೆ ಇರಾನ್ ನ ಇಂಧನ ಘಟಕದ ಮೇಲೆ ದಾಳಿ ನಡೆಸಿದರೆ ಪ್ರತಿದಾಳಿಯ ಎಚ್ಚರಿಕೆ ನೀಡಲಾಗಿತ್ತು. ಇದರ ಬೆನ್ನಿಗೆ ಟ್ರಂಪ್ ಕದನ ವಿರಾಮದ ಘೋಷಣೆ ಮಾಡಿದೆ ಎಂದು ತಿಳಿಸಿದೆ.

ಆದರೆ ಇರಾನ್ ಈ ರೀತಿಯ ಯಾವುದೇ ಸೂಚನೆ ನೀಡಿಲ್ಲ. ಈ ಕುರಿತು ಯಾವುದೇ ಮಾತುಕತೆಗಳು ಕೂಡ ನಡೆಯುತ್ತಿಲ್ಲ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ.

ಇರಾನಿನ ವಿದೇಶಾಂಗ ಸಚಿವ ಅರಾಘ್ಚಿ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, ಅಮೆರಿಕ ಜೊತೆ ಯಾವುದೇ ರೀತಿಯ ಶಾಂತಿ ಮಾತುಕತೆ ನಡೆದಿಲ್ಲ. ಒಂದು ವೇಳೆ ಜಗತ್ತಿನ ಉಳಿದ ರಾಷ್ಟಗಳಿಗೆ ಯುದ್ಧ ನಿಲ್ಲಬೇಕು ಎಂಬ ಆಶಯವಿದ್ದರೆ ನೀವು ಮುಂದೆ ಬಂದು ಅಮೆರಿಕ ಜೊತೆ ಮಾತನಾಡಿ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !