March 23, 2026
Monday, March 23, 2026
spot_img

ಇರಾನ್ ಮಾತಿಗೆ ಮತ್ತೆ ಗುಡುಗಿದ ಟ್ರಂಪ್: ಸಂಧಾನಕ್ಕೆ ಮೊರೆ ಇಟ್ಟಿದ್ದು ಅವರೇ ಎಂದ ದೊಡ್ಡಣ್ಣ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಐದು ದಿನಗಳ ಕದನ ವಿರಾಮ ಹೇಳಿಕೆಗೆ ತಿರುಗೇಟು ನೀಡಿದ್ದ ಇರಾನ್ ಮಾತಿಗೆ ಮತ್ತೆ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ನಾನು ಇರಾನ್‌ಗೆ ಕರೆ ಮಾಡಿಲ್ಲ, ಅವರೇ ನನಗೆ ಕರೆ ಮಾಡಿದ್ದು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ನಾವು ನೀಡಿದ್ದ ಎಚ್ಚರಿಕೆಗೆ ಹೆದರಿ ಟ್ರಂಪ್ ಅವರು ಕದನ ವಿರಾಮ ಘೋಷಿಸಿದ್ದಾರೆ ಎಂದು ಇರಾನ್ ಹೇಳಿಕೆ ನೀಡಿತ್ತು. ಈ ಮಾತಿಗೆ ಇದೀಗ ಮತ್ತೆ ಟ್ರಂಪ್ ಉತ್ತರಿಸಿದ್ದು, ನಾನಾಗಿ ಅವರಿಗೆ ಕರೆ ಮಾಡಿಲ್ಲ. ಅವರಾಗಿಯೇ ಕರೆ ಮಾಡಿ ಮಾತುಕತೆಯನ್ನು ಬಯಸಿದ್ದರು. ಹಾಗಾಗಿ ನಾವು ಒಪ್ಪಂದದ ನಿಲುವನ್ನು ಹೇಳಿಕೊಂಡೆ ಎಂದರು.

ನಾನು ಅಲ್ಲಿನ ಇತರೆ ನಾಯಕರ ಜೊತೆ ಮಾತನಾಡಿದೆ. ಯಾಕೆಂದರೆ ಅಲ್ಲಿನ ಹೊಸ ಸರ್ವೋಚ್ಚ ನಾಯಕ ಇನ್ನೂ ಜೀವಂತವಾಗಿದ್ದಾರೆಯೇ ಎಂದು ನನಗೆ ತಿಳಿದಿಲ್ಲ, ಹೀಗಾಗಿ ನಾನು ಅಲ್ಲಿನ ಇತರೆ ನಾಯಕರ ಜೊತೆ ಮಾತನಾಡಿದೆ ಎಂದು ಹೇಳಿಕೊಂಡರು.

ಆದರೆ ಒಂದೆಡೆ ಇರಾನ್ ಹೇಳಿಕೆಗಳು, ಮತ್ತೊಂದೆಡೆ ಟ್ರಂಪ್ ವಾದ ಮಧ್ಯಪ್ರಾಚ್ಯದಲ್ಲಿ ಹೊಸ ಗೊಂದಲವನ್ನೇ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಈ ನಿರ್ಧಾರಗಳು ಪರಿಣಾಮ ಬೀಳಲಿದೆ ಎಂಬುವುದು ದೊಡ್ಡ ಪ್ರಶ್ನೆ ಹುಟ್ಟುಹಾಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !