March 24, 2026
Tuesday, March 24, 2026
spot_img

Kitchen Tips | ಪೂರಿ ಹಿಟ್ಟನ್ನು ಈ ರೀತಿಯಾಗಿ ಕಲಸಿದ್ರೆ ಒಂದು ಚೂರು ಎಣ್ಣೆ ಹೀರಿಕೊಳ್ಳೊದಿಲ್ವಂತೆ

ಪೂರಿ ಎಲ್ಲರಿಗೂ ಇಷ್ಟವಾಗುವ ಬ್ರೇಕ್‌ಫಾಸ್ಟ್. ಆದರೆ ಹೆಚ್ಚು ಎಣ್ಣೆ ಹೀರಿಕೊಂಡರೆ ರುಚಿ ಕಡಿಮೆಯಾಗುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಲ್ಲ. ಹೀಗಾಗಿ ಈ ಸಿಂಪಲ್ ಟಿಪ್ಸ್‌ಗಳನ್ನು ಫಾಲೋ ಮಾಡಿದ್ರೆ ಪೂರಿ ಕ್ರಿಸ್ಪಿಯಾಗಿ, ಎಣ್ಣೆ ಕಡಿಮೆ ಹೀರಿಕೊಳ್ಳುತ್ತೆ ನೀವೇ ಟ್ರೈ ಮಾಡಿ.

  • ಪೂರಿ ಮಾಡಲು ಗೋಧಿ ಹಿಟ್ಟು ಸ್ವಲ್ಪ ಗಟ್ಟಿಯಾಗಿ ಇರಬೇಕು. ತುಂಬಾ ಮೃದುವಾಗಿ ಕಲಸಿದರೆ ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳುತ್ತದೆ.
  • ಹಿಟ್ಟಿಗೆ 1-2 ಚಮಚ ರವೆ ಸೇರಿಸಿದರೆ ಪೂರಿ ಕ್ರಿಸ್ಪಿಯಾಗಿ ಬಂದು, ಎಣ್ಣೆ ಕಡಿಮೆ ಹೀರಿಕೊಳ್ಳುತ್ತದೆ.
  • ಸ್ವಲ್ಪ ಬಿಸಿ ನೀರಿನಿಂದ ಹಿಟ್ಟು ಕಲಸಿದರೆ ಗ್ಲೂಟನ್ ಸ್ಟ್ರಕ್ಚರ್ ಚೆನ್ನಾಗಿದ್ದು, ಪೂರಿ ಎಣ್ಣೆ ಕಡಿಮೆ ಹೀರಿಕೊಳ್ಳುತ್ತದೆ.
  • ಹಿಟ್ಟು ಕಲಸುವಾಗ ಒಂದು ಟೀ ಸ್ಪೂನ್ ಎಣ್ಣೆ ಅಥವಾ ತುಪ್ಪ ಹಾಕಿದರೆ ಪೂರಿ ಮೃದುವಾಗಿದ್ದು, ಎಣ್ಣೆ ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.
  • ಹಿಟ್ಟನ್ನು ಕನಿಷ್ಠ 15-20 ನಿಮಿಷ ಮುಚ್ಚಿ ಇಟ್ಟರೆ ಪೂರಿ ಚೆನ್ನಾಗಿ ಉಬ್ಬುತ್ತದೆ ಮತ್ತು ಕಡಿಮೆ ಎಣ್ಣೆ ಹೀರುತ್ತದೆ.
  • ಎಣ್ಣೆ ಚೆನ್ನಾಗಿ ಬಿಸಿಯಾಗಿರಬೇಕು. ಕಡಿಮೆ ಬಿಸಿ ಎಣ್ಣೆಯಲ್ಲಿ ಪೂರಿ ಹಾಕಿದರೆ ಅದು ಹೆಚ್ಚು ಎಣ್ಣೆ ಹೀರಿಕೊಳ್ಳುತ್ತದೆ.

ಈ ಸರಳ ಟ್ರಿಕ್ಸ್ ಫಾಲೋ ಮಾಡಿದ್ರೆ, ನಿಮ್ಮ ಪೂರಿ ತಿನ್ನೋಕೆ ಟೇಸ್ಟಿ ಆಗಿರುತ್ತದೆ, ಜೊತೆಗೆ ಆರೋಗ್ಯಕ್ಕೂ ಬೆಸ್ಟ್!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !