July 28, 2026
Tuesday, July 28, 2026
spot_img

ಕೊಲ್ಲಿ ಬಿಕ್ಕಟ್ಟಿನ ನಡುವೆಯೇ ಪ್ರಧಾನಿ ಮೋದಿಗೆ ಟ್ರಂಪ್ ತುರ್ತು ಕರೆ: ಉಭಯ ನಾಯಕರಿಂದ ಮಹತ್ವದ ಚರ್ಚೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಚಯ ಬಿಕ್ಕಷ್ಟು ಇನ್ನಷ್ಟು ಉಲ್ಬಣಗೊಳ್ಳುತ್ತಿರುವ ನಡುವೆಯೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಸಂಜೆ ಕರೆಮಾಡಿ ಮಾತನಾಡಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಭಾರತದಲ್ಲಿರುವ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್, ಉಭಯ ನಾಯಕರು ತಮ್ಮ ಮಾತುಕತೆಯ ಸಂದರ್ಭ, ಇರಾನ್‌ನ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿ ಇಡುವ ಕುರಿತು ಚರ್ಚೆ ನಡೆಸಿದ್ದಾರೆ. ಜೊತೆಗೆ ಪ್ರಸುತ್ತ ನಡೆಯುತ್ತಿರುವ ಯುದ್ಧದ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದಿದ್ದಾರೆ.

ಟ್ರಂಪ್, ಪ್ರಧಾನಿ ಮೋದಿ ಅವರನ್ನು ತಮ್ಮ ಉತ್ತಮ ಸ್ನೇಹಿತ ಎಂದು ಪರಿಗಣಿಸಿದ್ದಾರೆ. ಇಂದಿನ ಅವರ ಮಾತುಕತೆ ಮೂಲಕ ಭಾರತ ಹಾಗೂ ಅಮೆರಿಕದ ನಡುವಿನ ಬಾಂಧವ್ಯಕ್ಕೆ ಮತ್ತಷ್ಟು ಮೌಲ್ಯ ಸಿಕ್ಕಂತಾಗಿದೆ ಎಂದು ಸೆರ್ಗಿಯೊ ಗೋರ್ ಹೇಳಿಕೊಂಡಿದ್ದಾರೆ.


ಟ್ರಂಪ್ ಜೊತೆಗಿನ ಮಾತುಕತೆಯನ್ನು ಖುದ್ದು ಪ್ರಧಾನಿ ಮೋದಿ ಅವರು ಕೂಡ ದೃಢಪಡಿಸಿದ್ದು, ಇಂದು ಟ್ರಂಪ್ ಅವರಿಂದ ದೂರವಾಣಿ ಕರೆ ಸ್ವೀಕರಿಸಿದ್ದೇನೆ. ಈ ವೇಳೆ ಇಬ್ಬರು ಹಲವು ವಿಚಾರಗಳನ್ನು ಹಂಚಿಕೊಂಡೆವು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಭಾರತ ಸದಾ ಶಾಂತಿಯನ್ನು ಬಯಸುತ್ತದೆ. ಈ ಮೂಲಕ ಜಗತ್ತಿಗೆ ಹಾರ್ಮುಜ್ ಜಲಸಂಧಿಯು ಮುಕ್ತ ವ್ಯಾಪಾರಕ್ಕೆ ಅತೀ ಅಗತ್ಯ. ಹೀಗಾಗಿ ನಾವು ಶಾಂತಿಯ ಪುನಃಸ್ಥಾಪಿಸಲು ಸದಾ ಬೆಂಬಲಿಸುವುದಾಗಿ ತಿಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !