ಮೇಷ
ಆಪ್ತರ ಜತೆಗೆ ಭಿನ್ನಮತ. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ಉತ್ತಮ ಫಲ. ಆರ್ಥಿಕ ಕೊರತೆ ನಿವಾರಣೆ.
ವೃಷಭ
ತೋಚಿದ್ದನ್ನು ಖರೀದಿಸಬೇಕೆಂಬ ಅಭ್ಯಾಸ ಭಾರೀ ವೆಚ್ಚಕ್ಕೆ ಕಾರಣವಾದೀತು. ಕೌಟುಂಬಿಕ ಸಹಕಾರ. ವಿದ್ಯಾರ್ಥಿಗಳಿಗೆ ಯಶ.
ಮಿಥುನ
ವೃತ್ತಿಯಲ್ಲಿ ಒತ್ತಡ ಹೆಚ್ಚು. ದಿನದಂತ್ಯಕ್ಕೆ ತೃಪ್ತಿಕರ ಫಲಿತಾಂಶ. ನಡೆನುಡಿಯಲ್ಲಿ ವಿನಯ ಇರಲಿ. ವಿದ್ಯಾರ್ಥಿಗಳಿಗೆ ತುಸು ಕಠಿಣ ಪರಿಸ್ಥಿತಿ. ಕಟಕ
ಕಠಿಣ ಕೆಲಸವನ್ನೂ ಸುಲಭದಲ್ಲಿ ಮುಗಿಸುವಿರಿ. ಆರೋಗ್ಯಕ್ಕೆ ಹೆಚ್ಚು ಗಮನ ಕೊಡಿ. ಅಪರಾಹ್ನ ಮನಸ್ಸು ಕೆಡಿಸುವ ಬೆಳವಣಿಗೆ ಉಂಟಾದೀತು.
ಸಿಂಹ
ಆಶಾವಾದ ಬಿಡದಿರಿ. ಆರಂಭದಲ್ಲಿ ಪ್ರತಿಕೂಲ ಸ್ಥಿತಿಯಿದ್ದರೂ ಬಳಿಕ ಎಲ್ಲ ಪೂರಕವಾಗಲಿದೆ. ವಿದ್ಯಾರ್ಥಿಗಳಿಗೂ ಇದು ಅನ್ವಯ.ಆರ್ಥಿಕ ಉನ್ನತಿ.
ಕನ್ಯಾ
ಜಾಗ ಖರೀದಿಯ ಯೋಚನೆಯಿದ್ದರೆ ಕಾಲ ಸೂಕ್ತವಾಗಿದೆ. ಮಕ್ಕಳ ಹಠಮಾರಿತನ ಕೋಪ ಬರಿಸಬಹುದು. ಅವರೆಡೆ ಹೆಚ್ಚು ಕಾಳಜಿ ತೋರಿ.
ತುಲಾ
ಮನೆಯಲ್ಲಿ ನೆಮ್ಮದಿ, ಸಹಕಾರ. ವಿರಸ ಶಮನ. ಹೊರಗಿನ ಕೆಲಸದಲ್ಲಿ ಹೆಚ್ಚು ಶ್ರಮ ವಹಿಸುವಿರಿ. ಅಪೇಕ್ಷಿತ ಸಹಕಾರ ದೊರಕಲಾರದು. ವೃಶ್ಚಿಕ
ದೈಹಿಕ ನೋವು ಕಾಡಬಹುದು. ಹೊಸ ವ್ಯಕ್ತಿಗಳ ಪರಿಚಯ. ಕೆಲವರಿಗೆ ಪಿತ್ರಾರ್ಜಿತ ಆಸ್ತಿ ಲಭ್ಯತೆ. ವಿದ್ಯಾರ್ಥಿಗಳ ಪರಿಶ್ರಮ ಸಾರ್ಥಕ.
ಧನು
ಕೆಲ ವಿಷಯಗಳಲ್ಲಿ ಅತಿರೇಕದ ವರ್ತನೆ ತೋರುವಿರಿ. ಇದು ಎಲ್ಲರಿಗೆ ಸಮ್ಮತವೆನಿಸದು. ಮನೆಯ ಸದಸ್ಯರ ಜತೆ ಉದ್ವಿಗ್ನ ಸ್ಥಿತಿ ಸಂಭವ.
ಮಕರ
ಕುಟುಂಬಸ್ಥರ ಮಾತಿಗೆ ಹೆಚ್ಚು ಗಮನ ಕೊಡಿ. ಅವರನ್ನು ನಿರ್ಲಕ್ಷಿಸಬೇಡಿ. ಆರೋಗ್ಯ ಏರುಪೇರು. ಅಜೀರ್ಣ ಸಮಸ್ಯೆ ಕಾಡಬಹುದು. ಕುಂಭ
ಆತ್ಮೀಯರ ಸಂಗಡ ಸಂಘರ್ಷ ನಡೆದೀತು. ಎದುರುತ್ತರ ಕೊಡದೆ ಮೌನದಿಂದಿರಿ. ವೃತ್ತಿಯ ಮೇಲೆ ಪರಿಣಾಮ ಬೀರದಂತೆ ಎಚ್ಚರವಿಡಿ.
ಮೀನ
ವೃತ್ತಿಯಲ್ಲಿ ಸಹೋದ್ಯೋಗಿ ಜತೆ ವಾಗ್ಯುದ್ಧ. ಬಸುರಿಯರು ಮಾನಸಿಕ ಒತ್ತಡಕ್ಕೆ ಒಳಗಾಗುವರು. ವಿದ್ಯಾರ್ಥಿಗಳಿಗೆ ಉನ್ನತಿ



