March 25, 2026
Wednesday, March 25, 2026
spot_img

ಎಲ್‌ಪಿಜಿ ಗ್ರಾಹಕರೇ ಗಮನಿಸಿ: ಸಿಲಿಂಡರ್ ಬುಕಿಂಗ್ ಅವಧಿ ಏರಿಕೆಯಾಗಿಲ್ಲ, ಹಳೆಯ ನಿಯಮವೇ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ನಿಯಮ ಬದಲಾವಣೆಯ ಸುದ್ದಿಗಳು ಕೇವಲ ವದಂತಿ ಎಂದು ಸರ್ಕಾರ ಹೇಳಿದೆ.

ಮಾರುಕಟ್ಟೆಯಲ್ಲಿ ಸಿಲಿಂಡರ್ ಕೊರತೆ ಉಂಟಾಗಿದೆ ಮತ್ತು ಪೂರೈಕೆಯನ್ನು ಸರಿದೂಗಿಸಲು ಗ್ಯಾಸ್ ಕಂಪನಿಗಳು ಬುಕಿಂಗ್ ಅವಧಿಯನ್ನು ವಿಸ್ತರಿಸಿವೆ ಎಂಬ ವರದಿಗಳು ಕೇಳಿಬಂದಿದ್ದವು.

ಸಾಮಾನ್ಯ ಗ್ರಾಹಕರು ಮುಂದಿನ ಬುಕಿಂಗ್‌ಗಾಗಿ 25 ದಿನಗಳ ಬದಲು 35 ದಿನ ಕಾಯಬೇಕು. ಉಜ್ವಲ ಯೋಜನೆಯ ಫಲಾನುಭವಿಗಳು 45 ದಿನ ಕಾಯಬೇಕು. ಎರಡು ಸಿಲಿಂಡರ್ ಸಂಪರ್ಕ ಹೊಂದಿರುವವರಿಗೂ ಈ ನಿಯಮ ಅನ್ವಯಿಸುತ್ತದೆ ಎಂದು ಹೇಳಲಾಗಿತ್ತು.

ಈ ಎಲ್ಲಾ ವರದಿಗಳನ್ನು ತಳ್ಳಿಹಾಕಿರುವ ಸರ್ಕಾರ, ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಮೂಲಕ ಈ ಕೆಳಗಿನ ಅಂಶಗಳನ್ನು ಖಚಿತಪಡಿಸಿದೆ:

ಹಳೆಯ ಬುಕಿಂಗ್ ನಿಯಮಗಳೇ ಮುಂದುವರಿಯಲಿವೆ. ನಗರ ಪ್ರದೇಶಗಳಲ್ಲಿ 25 ದಿನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ನಂತರ ಮರುಪೂರಣ ಬುಕ್ ಮಾಡುವ ಹಳೆಯ ಪದ್ಧತಿಯೇ ಜಾರಿಯಲ್ಲಿದೆ.

ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ, ಯಾವುದೇ ಕೊರತೆಯ ಆತಂಕ ಬೇಡ. ಅಧಿಕೃತವಲ್ಲದ ಇಂತಹ ಯಾವುದೇ ಸುದ್ದಿಯನ್ನು ನಂಬಬಾರದು ಎಂದು ಸರ್ಕಾರ ಜನರಲ್ಲಿ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !