March 25, 2026
Wednesday, March 25, 2026
spot_img

ಸಿಟಿ ಮಂದಿ ಇತ್ತ ಗಮನ ಕೊಡಿ: ಶುಕ್ರವಾರ ಚಿಕನ್-ಮಟನ್ ಅಂಗಡಿಗಳಿಗೆ ಬೀಳುತ್ತೆ ಬೀಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಅಂದ್ರೆನೆ ಹಬ್ಬಗಳ ಅಖಾಡ. ಈಗ ಶ್ರೀರಾಮನವಮಿ ಬರ್ತಿದೆ, ಈ ಸಂಭ್ರಮಕ್ಕೆ ಯಾವುದೇ ಅಡ್ಡಿಯಾಗಬಾರದು ಅಂತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಒಂದು ಇಂಪಾರ್ಟೆಂಟ್ ನೋಟಿಸ್ ಕೊಟ್ಟಿದೆ.

ಬರೋ ಮಾರ್ಚ್ 27, ಶುಕ್ರವಾರ, ರಾಮನವಮಿ ಪ್ರಯುಕ್ತ ಸಿಟಿಯಾದ್ಯಂತ ಮಾಂಸ ಮಾರಾಟಕ್ಕೆ ಫುಲ್ ಬ್ರೇಕ್ ಹಾಕಲಾಗಿದೆ. ಅಂದು ಕಸಾಯಿಖಾನೆಗಳು ಮಾತ್ರವಲ್ಲ, ಗಲ್ಲಿ ಗಲ್ಲಿಯ ಚಿಕನ್-ಮಟನ್ ಅಂಗಡಿಗಳೂ ಬಾಗಿಲು ಹಾಕಿರಬೇಕು ಅಂತ ಪಶುಸಂಗೋಪನಾ ಇಲಾಖೆ ಆರ್ಡರ್ ಮಾಡಿದೆ.

ಮಾರ್ಚ್ 27, ಇಡೀ ದಿನ ಚಿಕನ್, ಮಟನ್ ಹಾಗೂ ಯಾವುದೇ ರೀತಿಯ ಮಾಂಸದ ಮಾರಾಟ ಇರೋದಿಲ್ಲ. ಬೆಂಗಳೂರು ವ್ಯಾಪ್ತಿಯ ಎಲ್ಲಾ ಸಣ್ಣ-ದೊಡ್ಡ ಅಂಗಡಿಗಳು ಮತ್ತು ಔಟ್‌ಲೆಟ್‌ಗಳಿಗೆ ಈ ನಿಯಮ ಅನ್ವಯವಾಗುತ್ತೆ.

ಹಬ್ಬದ ಪವಿತ್ರತೆ ಕಾಪಾಡೋದು ನಮ್ಮೆಲ್ಲರ ಜವಾಬ್ದಾರಿ ಅಲ್ವಾ? ಹಾಗಾಗಿ ಎಲ್ಲರೂ ಈ ನಿಯಮ ಪಾಲಿಸಿ ಅಂತ ಅಧಿಕಾರಿಗಳು ಕೇಳಿಕೊಂಡಿದ್ದಾರೆ. ಒಂದು ವೇಳೆ ಯಾರಾದರೂ “ನಮಗೇನು ಬಿಡಿ” ಅಂತ ರೂಲ್ಸ್ ಬ್ರೇಕ್ ಮಾಡಿದ್ರೆ, ಕಾನೂನು ಕ್ರಮ ಪಕ್ಕಾ ಅಂತ ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !