ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ರಾಜಕೀಯ ಇತಿಹಾಸದಲ್ಲೇ ಒಂದು ಅತಿದೊಡ್ಡ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆಯುತ್ತಿದೆ. ಸದ್ಯಕ್ಕೆ ದೇಶದಲ್ಲಿರುವ 543 ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಬರೋಬ್ಬರಿ 816ಕ್ಕೆ ಏರಿಸಲು ತಯಾರಿ ನಡೆದಿದೆ. ಈ “ಮಾಸ್ಟರ್ ಪ್ಲಾನ್” ಜಾರಿಯಾದ್ರೆ, ನಮ್ಮ ಕರ್ನಾಟಕದ ಪವರ್ ಕೂಡ ಹೆಚ್ಚಾಗಲಿದೆ.
ರಾಜ್ಯದಲ್ಲಿ ಈಗಿರೋ 28 ಲೋಕಸಭಾ ಕ್ಷೇತ್ರಗಳು 42ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಅಂದ್ರೆ, ದೆಹಲಿಯಲ್ಲಿ ಕನ್ನಡಿಗರ ಸದ್ದು ಇನ್ನು ಜೋರಾಗಲಿದೆ.
2011ರ ಜನಗಣತಿ ಆಧಾರದ ಮೇಲೆ ಈ ವಿಂಗಡಣೆ ನಡೆಯಲಿದ್ದು, ಒಟ್ಟು 816 ಸ್ಥಾನಗಳಲ್ಲಿ 273 ಕ್ಷೇತ್ರಗಳು ಮಹಿಳೆಯರಿಗೇ ಮೀಸಲಾಗಲಿವೆ (33% ಮೀಸಲಾತಿ ಕಾಯ್ದೆಯಡಿ).
2029ರ ಲೋಕಸಭಾ ಚುನಾವಣೆಗೂ ಮುನ್ನವೇ ಈ ಐತಿಹಾಸಿಕ ಬದಲಾವಣೆ ಜಾರಿಗೆ ಬರುವ ಮುನ್ಸೂಚನೆ ಸಿಕ್ಕಿದೆ.
ಸಂಸತ್ತಿನಲ್ಲಿ ಹೆಚ್ಚಿನ ಜನಪ್ರತಿನಿಧಿಗಳು ಇರಬೇಕು, ಆಡಳಿತ ಜನರಿಗೆ ಹತ್ತಿರವಾಗಬೇಕು ಅನ್ನೋದು ಸರ್ಕಾರದ ಉದ್ದೇಶ. ಇದರಿಂದ ರಾಜಕೀಯ ಪಕ್ಷಗಳ ಲೆಕ್ಕಾಚಾರಗಳೂ ಬುಡಮೇಲಾಗಲಿವೆ.



