March 25, 2026
Wednesday, March 25, 2026
spot_img

ಸಿಲಿಂಡರ್ ಬೇಕೋ? ಪೈಪ್ ಲೈನ್ ಬೇಕೋ? ಕೇಂದ್ರ ಸರ್ಕಾರದಿಂದ ಹೊಸ ಡೆಡ್‌ಲೈನ್ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀವು ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ದಿನಗಟ್ಟಲೆ ಕಾಯ್ತಿದ್ದೀರಾ? ಅತ್ತ ಕೇಂದ್ರ ಸರ್ಕಾರ “ಗ್ಯಾಸ್ ಸ್ಟಾಕ್ ಇದೆ” ಅಂತಿದ್ರೂ, ಇತ್ತ ಗ್ರಾಹಕರಿಗೆ ಮಾತ್ರ ಸಿಲಿಂಡರ್ ಸಿಗೋದು ಲೇಟ್ ಆಗ್ತಿದೆ. ಈ ಗೊಂದಲದ ನಡುವೆಯೇ ಸರ್ಕಾರ ಈಗ ಪೈಪ್ಡ್ ಗ್ಯಾಸ್ (PNG) ಬಗ್ಗೆ ಹೊಸ ಬಾಂಬ್ ಸಿಡಿಸಿದೆ.

ನಿಮ್ಮ ಏರಿಯಾದಲ್ಲಿ ಗ್ಯಾಸ್ ಪೈಪ್‌ಲೈನ್ ಕನೆಕ್ಷನ್ ಇದ್ದೂ, ನೀವು ಅದನ್ನು ಬಳಸದೆ ಬರೀ ಸಿಲಿಂಡರ್ ಮೇಲೆಯೇ ಅವಲಂಬಿತರಾಗಿದ್ದರೆ, ಇನ್ಮುಂದೆ ನಿಮ್ಮ ಎಲ್‌ಪಿಜಿ ಸಪ್ಲೈ ಬಂದ್ ಆಗೋದು ಗ್ಯಾರಂಟಿ. ಪೈಪ್ಡ್ ಗ್ಯಾಸ್ ಮತ್ತು ಸಿಲಿಂಡರ್ ಎರಡನ್ನೂ ಒಟ್ಟಿಗೆ ಇಟ್ಟುಕೊಳ್ಳುವಂತಿಲ್ಲ ಎಂದು ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ.

ನಿಮ್ಮ ಏರಿಯಾದಲ್ಲಿ ಪೈಪ್‌ಲೈನ್ ಇದ್ದು ನೀವು ಕನೆಕ್ಷನ್ ತಗೊಂಡಿಲ್ಲ ಅಂದ್ರೆ, ನೋಟಿಸ್ ಕೊಟ್ಟ 3 ತಿಂಗಳೊಳಗೆ ನೀವು PNG ಕನೆಕ್ಷನ್ ಪಡೀಬೇಕು. ಇಲ್ಲದಿದ್ರೆ ನಿಮ್ಮ ಸಿಲಿಂಡರ್ ಪೂರೈಕೆ ಕಟ್ ಆಗುತ್ತೆ.

ಸಿಲಿಂಡರ್ ಬುಕ್ ಮಾಡೋದು, ರೀಫಿಲ್ ಮಾಡೋದು ಇವೆಲ್ಲ ತಲೆನೋವು ತಪ್ಪಿಸಲು ಸರ್ಕಾರ ಪಿಎನ್‌ಜಿ ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ.

ಪೈಪ್‌ಲೈನ್ ಹಾಕಲು ಅಡ್ಡಿಪಡಿಸುವಂತಿಲ್ಲ. ಅಪಾರ್ಟ್‌ಮೆಂಟ್‌ಗಳಿಗೆ 3 ದಿನದೊಳಗೆ ಅನುಮತಿ ನೀಡಬೇಕು ಮತ್ತು ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ ಎಂದು ಈ ಮೂಲಕ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !