ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಗತ್ತಿನ ಹಲವು ರಾಷ್ಟ್ರಗಳಿಗೆ ತೈಲ ಬಿಕ್ಕಟ್ಟು ಎದುರಾಗಿದ್ದು, ಫಿಲಿಫೈನ್ ದೇಶ ಇಂಧನ ತುರ್ತು ಘೋಷಣೆ ಮಾಡಿದೆ.
ಈ ಕುರಿತು ಫಿಲಿಫೈನ್ ಅಧ್ಯಕ್ಷ ಫರ್ಡಿನಾಂಡ್ ಮಾಕ್ರೋಸ್ ಜೂನಿಯರ್ ಹೇಳಿಕೆ ನೀಡಿದ್ದು, ಸದ್ಯ ದೇಶದಲ್ಲಿ ಲಭ್ಯವಿರುವ ಇಂಧನ ಬಳಸಬೇಕಾದ ಅನಿವಾರ್ಯತೆ ಬಂದಿದ್ದು, ಉಳಿದ ಇಂಧನಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಫಿಲಿಫೈನ್ಸ್‌ಶೇ .98 ರಷ್ಟು ಇಂಧನಗಳಿಗೆ ಗಲ್ಫ್ ರಾಷ್ಟ್ರವನ್ನೇ ಅವಲಂಬಿಸಿದ್ದು, ಆದರೆ ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ದೊಡ್ಡ ಹೊಡೆತವನ್ನೇ ನೀಡಿದೆ. ಇದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೆ ಏರಿದೆ.
ಇತ್ತ ಇಂಧನ ತುರ್ತು ಘೋಷಣೆಯಿಂದ ಕಾರ್ಮಿಕರು ಕಂಗಾಲಾಗಿದ್ದು, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



