March 26, 2026
Thursday, March 26, 2026
spot_img

ಪಲ್ಯ, ಗ್ರೇವಿ & More 46 | ಒಂದು ಸಲ ಈ ರೀತಿ ಬೇಬಿಕಾರ್ನ್ ಪಲ್ಯ ಮಾಡಿದ್ರೆ ಎಲ್ಲರಿಗೂ ಇದು ಫೇವರಿಟ್ ಆಗೋದು ಖಂಡಿತ

ಸಾಧಾರಣ ಆಲೂ, ಬೀನ್ಸ್ ಪಲ್ಯಗಳನ್ನು ಬಿಡಿ… ಇಂದು ಸ್ವಲ್ಪ ಡಿಫರೆಂಟ್ ಟ್ರೈ ಮಾಡೋಣ! ಬೇಬಿಕಾರ್ನ್ ಬಳಸಿ ಈ ಸ್ಪೆಷಲ್ ಪಲ್ಯ ಮಾಡಿದ್ರೆ, ಊಟಕ್ಕೆ ಹೊಸ ರುಚಿ ಸೇರುತ್ತೆ. ಮಾಡೋದೂ ಸುಲಭ, ಟೇಸ್ಟ್ ಮಾತ್ರ ಸೂಪರ್ ಹಿಟ್!

ಬೇಕಾಗುವ ಪದಾರ್ಥಗಳು:

ಬೇಬಿಕಾರ್ನ್ 200 ಗ್ರಾಂ, ಒಂದು ಈರುಳ್ಳಿ, 1 ಟೊಮ್ಯಾಟೊ, 2 ಹಸಿಮೆಣಸು, ಒಂದು ಟೀ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ 1 ಟೀ ಸ್ಪೂನ್, ಹಳದಿ ಚಿಟಿಕೆ, ಗರಂ ಮಸಾಲಾ ಅರ್ಧ ಟೀ ಸ್ಪೂನ್, ಉಪ್ಪು ರುಚಿಗೆ, ಎಣ್ಣೆ 2 ಟೇಬಲ್ ಸ್ಪೂನ್, ಸಾಸಿವೆ, ಕರಿಬೇವು, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ:

ಮೊದಲು ಬೇಬಿಕಾರ್ನ್ ತುಂಡುಗಳನ್ನು ಸ್ವಲ್ಪ ಉಪ್ಪಿನ ನೀರಲ್ಲಿ ಕುದಿಸಿ ಬದಿಗಿರಿಸಿ. ಈಗ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು ಹಾಕಿ. ನಂತರ ಈರುಳ್ಳಿ, ಹಸಿಮೆಣಸು ಹಾಕಿ ಸ್ವಲ್ಪ ಬಣ್ಣ ಬರುವವರೆಗೆ ಹುರಿಯಿರಿ.

ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಕಲಸಿ. ಬಳಿಕ ಟೊಮ್ಯಾಟೊ ಸೇರಿಸಿ ಮೃದುವಾಗುವವರೆಗೆ ಬೇಯಿಸಿ. ಇದಕ್ಕೆ ಮೆಣಸಿನ ಪುಡಿ, ಹಳದಿ, ಉಪ್ಪು, ಗರಂ ಮಸಾಲಾ ಸೇರಿಸಿ ಮಿಕ್ಸ್ ಮಾಡಿ.

ಈಗ ಬೇಬಿಕಾರ್ನ್ ಹಾಕಿ ಮಸಾಲಾ ಚೆನ್ನಾಗಿ ಹತ್ತುವಂತೆ 5 ನಿಮಿಷ ಫ್ರೈ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದ್ರೆ ಪಲ್ಯ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !