October 16, 2026
Friday, October 16, 2026
spot_img

ಡ್ರೋನ್ ಅಲ್ಲ, ಮಿಸೈಲ್ ಅಲ್ಲ: ರಷ್ಯಾ ತೈಲ ಹೊತ್ತಿದ್ದ ಹಡಗಿನ ಮೇಲೆ ಸಮುದ್ರದಾಳದಿಂದ ಅಟ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟರ್ಕಿ ನಿರ್ವಹಿಸುತ್ತಿದ್ದ ಕಚ್ಚಾ ತೈಲ ಟ್ಯಾಂಕರ್ ಮೇಲೆ ಕಪ್ಪು ಸಮುದ್ರದಲ್ಲಿ ಭೀಕರ ದಾಳಿ ನಡೆದಿದೆ. ಇಸ್ತಾನ್‌ಬುಲ್ ಸಮೀಪದ ಬಾಸ್ಪರಸ್ ಜಲಮಾರ್ಗದಿಂದ ಕೇವಲ 33 ಕಿಲೋಮೀಟರ್ ದೂರದಲ್ಲಿ ಈ ಘಟನೆ ಸಂಭವಿಸಿದ್ದು, ಅಂತರಾಷ್ಟ್ರೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಸಿಯೆರಾ ಲಿಯೋನ್ ಧ್ವಜ ಹೊತ್ತಿದ್ದ ಈ ಬೃಹತ್ ಹಡಗು, ರಷ್ಯಾದಿಂದ ಸುಮಾರು 10 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಹೊತ್ತು ನೊವೊರೊಸಿಸ್ಕ್ ಕಡೆಗೆ ಸಾಗುತ್ತಿತ್ತು. ಬುಧವಾರ ಮಧ್ಯರಾತ್ರಿ ಎಂಜಿನ್ ಕೋಣೆಯಲ್ಲಿ ಏಕಾಏಕಿ ಭೀಕರ ಸ್ಫೋಟ ಸಂಭವಿಸಿದೆ.

ಟರ್ಕಿಯ ಸಾರಿಗೆ ಸಚಿವ ಅಬ್ದುಲ್ಕದಿರ್ ಉರಾಲೋಗ್ಲು ಈ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ. ಇದು ಮೇಲ್ಗಡೆಯಿಂದ ನಡೆದ ಡ್ರೋನ್ ದಾಳಿಯಲ್ಲ, ಬದಲಾಗಿ ಸಮುದ್ರದ ಆಳದಿಂದ ಬಂದ ಮಾನವರಹಿತ ವಾಹನ ಬಳಸಿ ಎಂಜಿನ್ ರೂಮ್ ಅನ್ನೇ ಟಾರ್ಗೆಟ್ ಮಾಡಿ ನಡೆಸಿದ ಸಂಚು ಎಂದು ಅವರು ತಿಳಿಸಿದ್ದಾರೆ.

ಅದೃಷ್ಟವಶಾತ್, ಹಡಗಿನಲ್ಲಿದ್ದ 27 ಮಂದಿ ಟರ್ಕಿ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಟರ್ಕಿ ಸರ್ಕಾರ ರಕ್ಷಣಾ ಪಡೆಗಳನ್ನು ಕಳುಹಿಸಿದ್ದು, ಪರಿಸ್ಥಿತಿ ಈಗ ಹತೋಟಿಯಲ್ಲಿದೆ.

Must Read