March 26, 2026
Thursday, March 26, 2026
spot_img

ಏರ್ ಇಂಡಿಯಾದಲ್ಲಿ ಮತ್ತೆ ತಾಂತ್ರಿಕ ದೋಷ: ಹೋಗಿದ್ದು ಲಂಡನ್‌ಗೆ, ಕೊನೆಗೆ ಮರಳಿದ್ದು ದೆಹಲಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಂಡನ್ ಕನಸಿನೊಂದಿಗೆ ಹಾರಿದ್ದ ಏರ್ ಇಂಡಿಯಾ ಪ್ರಯಾಣಿಕರಿಗೆ ದೆಹಲಿಯಲ್ಲೇ ಲ್ಯಾಂಡಿಂಗ್ ಭಾಗ್ಯ ಸಿಕ್ಕಿದೆ. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ, ಸುಮಾರು 7 ಗಂಟೆಗಳ ಕಾಲ ಆಕಾಶದಲ್ಲೇ ಹಾರಾಟ ನಡೆಸಿದ ವಿಮಾನ ಕೊನೆಗೂ ದೆಹಲಿ ಏರ್‌ಪೋರ್ಟ್‌ಗೆ ಸುರಕ್ಷಿತವಾಗಿ ಮರಳಿದೆ.

ಸುಮಾರು 7 ಗಂಟೆಗಳ ಕಾಲ ಆಕಾಶದಲ್ಲೇ ಇದ್ದ ಈ ಏರ್‌ಬಸ್ A350-900 ವಿಮಾನ, ಸೌದಿ ಅರೇಬಿಯಾದ ಆಕಾಶದಲ್ಲಿ ಹಾರಾಡುತ್ತಿದ್ದಾಗ ವಿಚಿತ್ರ ಶಬ್ದ ಕೇಳಿಬಂದಿದೆ. ಬೆಳಿಗ್ಗೆ 6 ಗಂಟೆಗೆ ಟೇಕ್ ಆಫ್ ಆಗಿದ್ದ ವಿಮಾನ, ಮಧ್ಯಾಹ್ನ 12:30 ಸುಮಾರಿಗೆ ಮತ್ತೆ ದೆಹಲಿಯಲ್ಲೇ ಲ್ಯಾಂಡ್ ಆಗಿದೆ. ಅಂದಹಾಗೆ, ಇದೇ ವಿಮಾನದಲ್ಲಿ ಒಂದೇ ತಿಂಗಳಲ್ಲಿ ಈ ರೀತಿ ತಾಂತ್ರಿಕ ಸಮಸ್ಯೆ ಕಾಡುತ್ತಿರುವುದು ಇದು ಎರಡನೇ ಬಾರಿ.

“ಪ್ರಯಾಣಿಕರ ಸೇಫ್ಟಿ ನಮಗೆ ಮುಖ್ಯ. ಹಾಗಾಗಿ ರಿಸ್ಕ್ ತಗೊಳ್ಳದೆ ವಿಮಾನ ವಾಪಸ್ ತರಿಸಲಾಗಿದೆ” ಎಂದು ಸಂಸ್ಥೆ ತಿಳಿಸಿದೆ. ಸದ್ಯಕ್ಕೆ ವಿಮಾನದ ರಿಪೇರಿ ಕೆಲಸ ನಡೀತಿದ್ದು, ಪ್ರಯಾಣಿಕರನ್ನು ಬೇಗ ಲಂಡನ್‌ಗೆ ಕಳುಹಿಸಿಕೊಡಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !