March 27, 2026
Friday, March 27, 2026
spot_img

ಐಪಿಎಲ್ ಟಿಕೆಟ್ ಕೇಳುವುದರಲ್ಲಿ ಏನಿದೆ ತಪ್ಪು?: ಶಾಸಕರ ಪರ ಡಿಸಿಎಂ, ಪರಂ ಬ್ಯಾಟಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆಯಿಂದ ಐಪಿಎಲ್ ಪಂದ್ಯದ ಅಬ್ಬರ ಶುರುವಾಗಲಿದ್ದು, ಈಗಾಗಲೇ ಟಿಕೆಟ್ ಖರೀದಿಯ ಭರಾಟೆ ಜೋರಾಗಿದೆ. ಇದರ ನಡುವೆ ರಾಜ್ಯ ಶಾಸಕರೂ ಕೂಡ ವಿಐಪಿ ಟಿಕೆಟ್‌ ಗಾಗಿ ಬೇಡಿಕೆ ಇಟ್ಟಿದ್ದು, ಈ ಹಿನ್ನೆಲೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತುಕತೆ ನಡೆಸಿದ್ದಾರೆ.

ಶಾಸಕರು ಕ್ರೀಡಾಸಕ್ತಿ ಹೊಂದಿರುವುರಲ್ಲಿ ಏನಿದೆ ತಪ್ಪು? ಈ ಕುರಿತು ನಾನು ಹೆಚ್ಚು ಆದ್ಯತೆ ನೀಡುತ್ತೇನೆ. ಶಾಸಕರಿಗೂ ಟಿಕೆಟ್ ಸಿಗುವಂತೆ ಯೋಜನೆ ಮಾಡುತ್ತೇವೆ ಎಂದು ಹೇಳಿದರು.

ಇನ್ನು ಗೃಹ ಸಚಿವ ಪರಮೇಶ್ವರ್​ ಕೂಡ ಸಮರ್ಥನೆ ನೀಡಿದ್ದು, ಶಾಸಕರು ಟಿಕೆಟ್ ಕೇಳುವುದು ತಪ್ಪಲ್ಲ. ಆರ್‌ಸಿಬಿ ಮತ್ತು ಕೆಎಸ್‌ಸಿಎ ಈ ಕುರಿತು ತೀರ್ಮಾನ ಮಾಡಬೇಕು ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !