October 4, 2026
Sunday, October 4, 2026
spot_img

ಮದ್ದೂರಿನಲ್ಲಿ ಶಾಲಾ ವಾಹನಕ್ಕೆ ಬಸ್ ಡಿಕ್ಕಿ: 16 ವಿದ್ಯಾರ್ಥಿಗಳು ಸಹಿತ 40 ಮಂದಿಗೆ ಗಾಯ

ಹೊಸದಿಗಂತ ವರದಿ,ಮದ್ದೂರು :

ಶಾಲಾ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿಯಾಗಿ 16 ಮಂದಿ ವಿದ್ಯಾರ್ಥಿಗಳು ಸೇರಿದಂತೆ 40 ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ತಾಲೂಕಿನ ಸೋಮನಹಳ್ಳಿ ಸಮೀಪದ ಕೆಸ್ತೂರು ಕ್ರಾಸ್ ಬಳಿ ನಡೆದಿದೆ.

ಮದ್ದೂರು ಮರಿಯಪ್ಪ ಕಾನ್ವೆಂಟ್ ನ 16 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಮೂವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಖಾಸಗಿ ಬಸ್ ನಲ್ಲಿನದ್ದ ಕೊಳ್ಳೆಗಾಲದ ಬೋರಮ್ಮ, ಸುಜಾತ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಮಂದಿ ಗಾಯಗೊಂಡು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿ ಹೋಗಿದ್ದಾರೆ.

ಕೆಸ್ತೂರು ಕ್ರಾಸ್ ಬಳಿ ಶಾಲಾ ಬಸ್ ತಿರುವು ಪಡೆಯುತ್ತಿದ್ದ ವೇಳೆ ಬೆಂಗಳೂರಿಗೆ ತೆರಳುತ್ತಿದ್ದ ಉದಯರಂಗ ಬಸ್ ಡಿಕ್ಕಿ ಹೊಡೆದಿದೆ. ಘಟನೆ ಸಂಬಂಧ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾರ್ವಜನಿಕರ ನೆರವಿನಿಂದ ಗಾಯಾಳುಗಳಾದ ಶಾಲಾ ಮಕ್ಕಳು ಸೇರಿದಂತೆ ಹಲವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ .

Must Read