September 14, 2026
Monday, September 14, 2026
spot_img

ಇಂದಿನಿಂದ ಐಪಿಎಲ್‌ ಫೀವರ್‌ ಶುರು, ನಮ್ಮ ಮೆಟ್ರೋ ಕಡೆಯಿಂದ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದಿನಿಂದ ಐಪಿಎಲ್‌ ಫೀವರ್‌ ಆರಂಭವಾಗಲಿದ್ದು ನಮ್ಮ ಮೆಟ್ರೋ ಕಡೆಯಿಂದ ಗುಡ್‌ನ್ಯೂಸ್‌ ಸಿಕ್ಕಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವೆ ಪಂದ್ಯ ನಡೆಯಲಿದೆ. ಇದಕ್ಕಾಗಿ ಮೆಟ್ರೋ ರೈಲು ಸೇವಾ ಅವಧಿಯನ್ನು ವಿಸ್ತರಿಸಿದೆ.

ಕ್ರಿಕೆಟ್‌ ಪ್ರೇಕ್ಷಕರು ಸುಗಮವಾಗಿ ಮ್ಯಾಚ್‌ಗೆ ಹೋಗಿ ಬರಲಿ ಎಂದು ನಮ್ಮ ಮೆಟ್ರೋವನ್ನು ತಡರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ.

ಕಡೆಯ ಮೆಟ್ರೋ ವೈಟ್‌ಫೀಲ್ಡ್ (ಕಾಡುಗೋಡಿ): ರಾತ್ರಿ 12:30ಕ್ಕೆ, ಕಡೆಯ ಮೆಟ್ರೋ ಚಲ್ಲಘಟ್ಟ: ರಾತ್ರಿ 12:45ಕ್ಕೆ, ಕಡೆಯ ಮೆಟ್ರೋ ರೇಷ್ಮೆ ಸಂಸ್ಥೆ ಮತ್ತು ಮಾದಾವರ: ರಾತ್ರಿ 12:45ಕ್ಕೆ, ಕಡೆಯ ಮೆಟ್ರೋ ಬೊಮ್ಮಸಂದ್ರ: ರಾತ್ರಿ 01:00
ಆರ್.ವಿ. ರಸ್ತೆ: ರಾತ್ರಿ 02:00ಕ್ಕೆ ಬರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !