ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದೀಗ ಚಿಕ್ಕಮಗಳೂರು ಹಾಗೂ ಮೂಡಿಗೆರೆ ನಗರದಲ್ಲಿ ಗಾಳಿ ಮಳೆ ಹೆಚ್ಚಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗಿದೆ.
ಬೆಳಗ್ಗೆ ಮನೆಬಿಡುವಾಗ ಬಿಸಿಲಿತ್ತು, ನಾವು ಛತ್ರಿ ತೆಗೆದುಕೊಂಡು ಹೋಗಿಲ್ಲ. ಈಗ ನೋಡಿದ್ರೆ ಸಡನ್ ಭಾರೀ ಗಾಳಿ ಮಳೆ ಎಂದು ಜನ ಹೇಳುತ್ತಿದ್ದಾರೆ.
ಚಿಕ್ಕಮಗಳೂರು ನಗರದಲ್ಲೂ ಮಳೆ ಅಬ್ಬರಿಸುತ್ತಿದೆ. ಭಾರೀ ಗಾಳಿ ಜೊತೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಯಾವುದೇ ಮುನ್ಸೂಚನೆ ಇಲ್ಲದೇ ಆರಂಭವಾದ ಮಳೆಯಿಂದ ಜನ ಪರದಾಡುವಂತಾಗಿದೆ. ವಾಹನ ಸವಾರರು ವಾಹನ ಚಾಲನೆ ಮಾಡಲು ಸಾಧ್ಯವಾಗದೆ ಪರದಾಡಿದ್ದಾರೆ. ಬೈಕ್ ಸವಾರರು ಅಂಗಡಿಗಳು, ಬಸ್ ನಿಲ್ದಾಣಗಳ ಆಶ್ರಯ ಪಡೆದಿದ್ದಾರೆ. ಕೆಲವೆಡೆ ಗಾಳಿಯ ಅಬ್ಬರಕ್ಕೆ ಕಬ್ಬಿಣದ ತಗಡುಗಳು ಹಾರಿ ಹೋಗಿವೆ.
ದ್ವಿಚಕ್ರ ವಾಹನ ಸವಾರರು ತಮ್ಮ ಗಾಡಿಗಳನ್ನು ನಿಲ್ಲಿಸಿ ಅಂಗಡಿ ಮುಂಗಟ್ಟುಗಳ ಸೂರಿನಡಿ ನಿಂತುಕೊಂಡಿದ್ದಾರೆ. ಮಳೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ.



