March 29, 2026
Sunday, March 29, 2026
spot_img

ಪಲ್ಯ, ಗ್ರೇವಿ & More 48 | ಎರಡು ಚಪಾತಿ ಜಾಸ್ತಿನೇ ತಿಂತೀರ ಈ ಮಟರ್-ಗೋಬಿ ಕರಿ ಇದ್ರೆ

ಸಾಧಾರಣ ಮಟರ್-ಗೋಬಿ ಅಲ್ಲ… ಇದು ಢಾಬಾ ಸ್ಟೈಲ್! ಸ್ಮೋಕಿ ಫ್ಲೇವರ್ + ರಿಚ್ ಗ್ರೇವಿ ಇದ್ರಲ್ಲಿ ಸ್ಪೆಷಲ್ ಟಚ್ ಇದೆ.

ಬೇಕಾಗುವ ಪದಾರ್ಥಗಳು

ಗೋಬಿ – 2 ಕಪ್
ಮಟರ್ (ಬಟಾಣಿ) – 1 ಕಪ್
ಈರುಳ್ಳಿ – 2
ಟೊಮೇಟೊ – 2
ಕಾಜು – 8-10 (ಪೇಸ್ಟ್)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಸ್ಪೂನ್
ಕಸೂರಿ ಮೆಂತ್ಯೆ – 1 ಸ್ಪೂನ್
ಬೆಣ್ಣೆ + ಎಣ್ಣೆ
ಹಳದಿ, ಮೆಣಸಿನ ಪುಡಿ, ಧನಿಯಾ ಪುಡಿ, ಗರಂ ಮಸಾಲಾ
ಉಪ್ಪು

ಮಾಡುವ ವಿಧಾನ
ಗೋಬಿ ತುಂಡುಗಳನ್ನು ಸ್ವಲ್ಪ ಎಣ್ಣೆಯಲ್ಲಿ ಫ್ರೈ ಮಾಡಿ (ಇದು ಧಾಬಾ ಟೇಸ್ಟ್ ಕೊಡುತ್ತದೆ).
ಪ್ಯಾನ್‌ನಲ್ಲಿ ಬೆಣ್ಣೆ + ಎಣ್ಣೆ ಹಾಕಿ ಈರುಳ್ಳಿ ಫ್ರೈ ಮಾಡಿ.
ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಟೊಮೇಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ.
ಮಸಾಲೆಗಳು ಹಾಕಿ, ನಂತರ ಕಾಜು ಪೇಸ್ಟ್ ಸೇರಿಸಿ ಇದ್ರಿಂದ ಗ್ರೇವಿಗೆ ರಿಚ್ ಟೇಸ್ಟ್ ಬರುತ್ತೆ.
ಈಗ ಗೋಬಿ + ಮಟರ್ ಸೇರಿಸಿ, ಸ್ವಲ್ಪ ನೀರು ಹಾಕಿ ಬೇಯಿಸಿ.
ಕೊನೆಯಲ್ಲಿ ಕಸೂರಿ ಮೆಂತ್ಯೆ + ಗರಂ ಮಸಾಲಾ ಹಾಕಿ.

ಸ್ಪೆಷಲ್ ಟ್ರಿಕ್ (ಸ್ಮೋಕಿ ಫ್ಲೇವರ್)
ಒಂದು ಚಿಕ್ಕ ಕಲ್ಲು ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡಿ
ಕರಿಯ ಮಧ್ಯೆ ಒಂದು ಕಪ್ ಇಟ್ಟು ಅದರಲ್ಲಿ ಆ ಕೆಂಡ ಹಾಕಿ
ಮೇಲಿಂದ ಸ್ವಲ್ಪ ತುಪ್ಪ ಹಾಕಿ ಮುಚ್ಚಿ 2 ನಿಮಿಷ ಬಿಡಿ
ಈ ಟ್ರಿಕ್ ಸ್ಮೋಕಿ ಟೇಸ್ಟ್ ಕೊಡುತ್ತದೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !