March 29, 2026
Sunday, March 29, 2026
spot_img

Ice Candy | ಸುಡು ಬೇಸಿಗೆಯನ್ನು ಕರಗಿಸುವ ಕೂಲ್ ಕೂಲ್ ಕಲ್ಲಂಗಡಿ ಹಣ್ಣಿನ ಐಸ್ ಕ್ಯಾಂಡಿ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಸಹಜ ಮತ್ತು ಆರೋಗ್ಯಕರ ಹಣ್ಣು ಅಂದ್ರೆ ಅದು ಕಲ್ಲಂಗಡಿ. ನೀರಿನ ಪ್ರಮಾಣ ಹೆಚ್ಚು ಇರುವ ಈ ಹಣ್ಣು ದೇಹದ ಹೈಡ್ರೇಶನ್‌ ಕಾಪಾಡುತ್ತದೆ. ಇದರಿಂದ ತಯಾರಿಸುವ ಐಸ್ ಕ್ಯಾಂಡಿ ಮಕ್ಕಳಿಗಂತೂ ಪಂಚಪ್ರಾಣ. ನೀವೂ ಮಾಡಿ ನಿಮ್ಮ ಮಕ್ಕಳಿಗೆ ಕೊಡಿ.

ಬೇಕಾಗುವ ಸಾಮಗ್ರಿಗಳು:

ಕಲ್ಲಂಗಡಿ ಹಣ್ಣು – 3 ಕಪ್
ಸಕ್ಕರೆ – 2 ರಿಂದ 3 ಟೇಬಲ್ ಸ್ಪೂನ್
ನಿಂಬೆ ರಸ – 1 ಟೇಬಲ್ ಸ್ಪೂನ್
ಉಪ್ಪು – ಚಿಟಿಕೆ

ತಯಾರಿಸುವ ವಿಧಾನ:

ಮೊದಲು ಕಲ್ಲಂಗಡಿ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಜ್ಯೂಸ್ ಮಾಡಿ. ಅದಕ್ಕೆ ಸಕ್ಕರೆ, ನಿಂಬೆ ರಸ ಮತ್ತು ಚಿಟಿಕೆ ಉಪ್ಪು ಸೇರಿಸಿ ಮತ್ತೆ ಮಿಕ್ಸ್ ಮಾಡಿ.

ಈ ಮಿಶ್ರಣವನ್ನು ಐಸ್ ಕ್ಯಾಂಡಿ ಮೌಲ್ಡ್‌ಗಳಿಗೆ ಅಥವಾ ಸಣ್ಣ ಗ್ಲಾಸ್‌ಗಳಿಗೆ ಹಾಕಿ ಮಧ್ಯದಲ್ಲಿ ಐಸ್ ಕಡ್ಡಿಗಳನ್ನು ಇಟ್ಟು ಫ್ರೀಜರ್‌ನಲ್ಲಿ 6-8 ಗಂಟೆಗಳವರೆಗೆ ಇಡಿ.

ಸಂಪೂರ್ಣವಾಗಿ ಗಟ್ಟಿಯಾದ ಬಳಿಕ ಹೊರತೆಗೆದು ತಂಪಾಗಿ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !