July 28, 2026
Tuesday, July 28, 2026
spot_img

ಮೈಯಲ್ಲಿ ದೆವ್ವ ಬಂದಿತ್ತು ಎನ್ನುತ್ತಾ ವಿಮಾನದ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನಿಸಿದ ಭೂಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಗೋ ವಿಮಾನದಲ್ಲಿ ಪ್ರಯಾಣದ ವೇಳೆ ಪ್ರಯಾಣಿಕನೋರ್ವ ಮೈಯಲ್ಲಿ ದೆವ್ವ ಬಂದಿತ್ತು ಎನ್ನುತ್ತಾ ವಿಮಾನ ಲ್ಯಾಂಡ್‌ ಆಗುವ ಮುನ್ನವೇ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ ಘಟನೆ ನಡೆದಿದೆ.

ಅದೃಷ್ಟವಶಾತ್‌ ಬಾಗಿಲು ತೆರೆಯದ ಕಾರಣ ದೊಡ್ಡ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ 6E-185 ಇಂಡಿಗೋ ವಿಮಾನ ಇನ್ನೇನ್ನು ಕೆಲವೇ ನಿಮಿಷದಲ್ಲಿ ಲ್ಯಾಂಡ್‌ ಆಗಲಿದೆ ಎನ್ನುವಾಗ ಮೊಹಮ್ಮದ್‌ ಅದ್ನಾನ್‌ ಎನ್ನುವ ಪ್ರಯಾಣಿಕ ತುರ್ತು ನಿರ್ಗಮನ ಬಾಗಿಲು ತೆಗೆಯಲು ಯತ್ನಿಸಿದ್ದಾನೆ. ಈ ವೇಳೆ ಧಾವಿಸಿದ ವಿಮಾನ ಸಿಬ್ಬಂದಿಗಳು ಈ ರೀತಿ ಮಾಡದಂತೆ ಎಚ್ಚರಿಕೆ ಎಚ್ಚರಿಸಿದ್ದಾರೆ. ಆದರೆ ಕೆಲ ಕ್ಷಣಗಳ ಸಮಯ ಸುಮ್ಮನ್ನೆ ಇದ್ದ ಅದ್ನಾನ್ ಮತ್ತೊಮ್ಮೆ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದು, ಕೂಡಲೇ ಧಾವಿಸಿದ ವಿಮಾನ ಸಿಬ್ಬಂದಿ ಆತನ ಪ್ರಯತ್ನ ತಡೆದರು. ಬಳಿಕ ವಿಮಾನವು ಸುರಕ್ಷಿತವಾಗಿ ಲ್ಯಾಂಡ್‌ ಆಯಿತು.

ಕೊನೆಗೆ ಮೊಹಮ್ಮದ್‌ ಅದ್ನಾನ್‌ನನ್ನು ಭದ್ರತಾ ಸಿಬ್ಬಂದಿಯ ವಶಕ್ಕೆ ಒಪ್ಪಿಸಲಾಯಿತು.ಈ ವೇಳೆ ತಾನು ಯಾಕೆ ಆ ರೀತಿ ವರ್ತಿಸಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಆ ಸಮಯದಲ್ಲಿ ಮೈಯಲ್ಲಿ ದೆವ್ವ ಬಂದಿತ್ತು. ಹೀಗಾಗಿ ಭಯದಿಂದ ಡೋರ್‌ ತೆರೆಯಲು ಮುಂದಾದೆ ಎಂದು ಹೇಳಿಕೊಂಡಿದ್ದಾನೆ. ಬಳಿಕ ಪೋಲಿಸರು ಅದ್ನಾನ್ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !