March 30, 2026
Monday, March 30, 2026
spot_img

ದಿನಭವಿಷ್ಯ: ಸಣ್ಣ ಸಣ್ಣ ವಿಷಯಗಳಿಗೆ ಟೆನ್ಶನ್ ಮಾಡ್ಬೇಡಿ, ಖರ್ಚು ಕಡಿಮೆ ಮಾಡೋಕೆ ಪ್ರಯತ್ನಿಸಿ

ಮೇಷ
ಭಾವುಕ ಸನ್ನಿವೇಶ. ನಿಮ್ಮ ಮನಸ್ಸಿನ ದೌರ್ಬಲ್ಯ ಎಲ್ಲರಿಗೂ ತಿಳಿಯದಂತೆ ಎಚ್ಚರ ವಹಿಸಿ. ಕೌಟುಂಬಿಕ ಅಶಾಂತಿ ಹೆಚ್ಚಲು ಅವಕಾಶ ಕೊಡಬೇಡಿ.
ವೃಷಭ
ನಿಮ್ಮ ಪ್ರಗತಿಗೆ ಅಡ್ಡಿ ತರುತ್ತಿರುವ ವಿಷಯ ಪರಿಹರಿಸಿಕೊಳ್ಳಿ. ನಿಮ್ಮ ಬಗ್ಗೆ ಕೆಲವರು ಈರ್ಷ್ಯೆ ತೋರುವರು. ಅವರಿಂದ ಟೀಕೆ ಕೇಳುವಿರಿ.
ಮಿಥುನ
ಸ್ವಂತ ವ್ಯವಹಾರದಲ್ಲಿ ಎಚ್ಚರದಿಂದ ಹೆಜ್ಜೆ ಇಡಿ. ಸಮೀಪ ಬಂಧುಗಳ ಅಸಹಕಾರ ಎದುರಿಸುವಿರಿ. ಮನೆಯಲ್ಲಿ ಬಿಗು ವಾತಾವರಣ ಸಂಭವ.
ಕಟಕ
ಕೆಲಸದ ಒತ್ತಡದಿಂದ ಹೊರಬಂದು ಕುಟುಂಬ ಸದಸ್ಯರ ಜತೆ ಕಾಲ ಕಳೆಯಿರಿ. ಅವರ ಸಂತೋಷಕ್ಕೂ ಗಮನ ಕೊಡಿ. ಧನವ್ಯಯ.
ಸಿಂಹ
ಕಠಿಣವೆಂದು ಭಾವಿಸಿದ ಕಾರ್ಯ ಸುಲಭದಲ್ಲಿ ಪೂರ್ಣ. ಆದರೂ ಏನೋ ಕೊರಗು ಉಳಿಯಲಿದೆ. ಬಂಧು ಜತೆ ತಿಕ್ಕಾಟ ಸಂಭವ.
ಕನ್ಯಾ
ಕಾಯುತ್ತಿದ್ದ ಅವಕಾಶವೊಂದು ಇಂದು ಸಿಗುವುದು. ಆದರೆ ಅದರಿಂದ ನಿಮಗೆ ಹೆಚ್ಚು ಲಾಭವಾಗದು. ಕೌಟುಂಬಿಕ ವೈಮನಸ್ಸು.
ತುಲಾ
ಹೆಚ್ಚು ಉತ್ಸಾಹದ ದಿನ. ಸಣ್ಣ ವಿಷಯಕ್ಕೆ ಅತಿಯಾದ ಪ್ರಾಮುಖ್ಯತೆ ಕೊಡಬೇಡಿ. ಸಂಘರ್ಷಕ್ಕಿಂತ ಹೊಂದಾಣಿಕೆ ಒಳಿತು. ಆರ್ಥಿಕ ಉನ್ನತಿ.
ವೃಶ್ಚಿಕ
ಹೊಸ ವ್ಯವಹಾರಕ್ಕೆ ಈಗಲೆ ಕೈಹಾಕದಿರಿ. ವಿಘ್ನಗಳು ಕಾಡಬಹುದು. ನಿಮ್ಮ ತಪ್ಪು ತಿದ್ದಿಕೊಳ್ಳಿ. ಟೀಕೆಗೆ ಅವಕಾಶ ಕೊಡಬೇಡಿ.
ಧನು
ಗುರಿ ಸಾಧನೆಗೆ ಕೆಲವರು ಅಡ್ಡಗಾಲು ಹಾಕುವರು. ಖರ್ಚು ಕಡಿಮೆ ಮಾಡಲು ಗಮನ ಕೊಡಿ. ಬಂಧುಗಳ ಜತೆ ಜಗಳವಾಡದಿರಿ.
ಮಕರ
ವಿರೋಧಿಗಳ ಮನಸ್ಸನ್ನೂ ಇಂದು ಒಲಿಸಬಲ್ಲಿರಿ. ಇದು ನಿಮ್ಮ ವ್ಯವಹಾರವನ್ನು ಸುಲಲಿತಗೊಳಿಸಲಿದೆ. ಆರ್ಥಿಕ ಸ್ಥಿತಿ ಉನ್ನತಿ.
ಕುಂಭ
ನಿಮ್ಮ ನಿಲುವಿನಲ್ಲಿ ಬದಲಾವಣೆ ತರುವ ಬೆಳವಣಿಗೆ. ನಿಮ್ಮ ಮೂಗಿನ ನೇರಕ್ಕೇ ವ್ಯವಹರಿಸಬೇಡಿ. ಇತರರ ಮಾತಿಗೂ ಬೆಲೆಯಿರಲಿ.
ಮೀನ
ಕೆಲಸದ ಒತ್ತಡದಿಂದ ಮುಕ್ತಿ. ಸ್ವಲ್ಪ ಮಟ್ಟಿನ ನಿರಾಳತೆ. ಮನೆಯಲ್ಲೂ ಪೂರಕ ಬೆಳವಣಿಗೆ. ಮಕ್ಕಳ ಸಾಧನೆಯಿಂದ ತೃಪ್ತಿ. ಖರ್ಚು ಹೆಚ್ಚಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !