July 23, 2026
Thursday, July 23, 2026
spot_img

SHOCKING | ಬಾಗಿಲಿಗೆ ಇಟ್ಟಿದ್ದ ಒಣಗಿದ ದಾಸವಾಳ ಹೂವು ನುಂಗಿ ಆರು ತಿಂಗಳ ಕಂದಮ್ಮ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೈಸೂರಿನ ಹುಣಸೂರು ಬಳಿಯ ದೊಡ್ಡ ಹೆಜ್ಜೂರು ಗ್ರಾಮದ ಮನೆಯೊಂದರಲ್ಲಿ ಹೂವನ್ನು ನುಂಗಿ ಕಂದಮ್ಮ ಮೃತಪಟ್ಟಿದೆ.

ಮನೆಯ ಹೊಸ್ತಿಲಿನಲ್ಲಿ ಪೂಜೆಗೆ ಇಟ್ಟಿದ್ದ ದಾಸವಾಳ ಹೂವು ಒಣಗಿತ್ತು. ಆರುವರೆ ತಿಂಗಳ ಕಂದಮ್ಮ ಚಿನ್ಮಯಿಗೌಡ ಆಟ ಆಡುತ್ತಾ ಹೂವನ್ನು ತಿಂದಿದೆ.

ನುಂಗಿದ ಕೆಲವೇ ಸಮಯದಲ್ಲಿ ಮಗುವಿಗೆ ಉಸಿರಾಟದ ತೊಂದರೆಯಾಗಿದೆ. ತಕ್ಷಣ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.

ಕಣ್ಣೆದುರೇ ಕಂದಮ್ಮನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !