ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಮ್ಯಾಚ್ ನೋಡಲು ಪ್ರತೀ ಶಾಸಕರಿಗೆ ಟಿಕೆಟ್ ನೀಡಬೇಕೆಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಬಾರಿ ಒಬ್ಬ ಶಾಸಕರಿಗೆ 3 ಟಿಕೆಟ್ ಕೊಡುವುದಾಗಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಿರ್ಧರಿಸಿದೆ.
ರಾಜ್ಯ ಕ್ರಿಕೆಟ್ ಅಸೋಸಿಯೇಷನ್ , ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಳಿತ ಮಂಡಳಿಗಳ ಪದಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದರು.
ಈ ಹಿಂದೆ ಎರಡು ಟಿಕೆ ನೀಡಲಾಗುವುದು ಎಂದಿದ್ದರು. ಇದೀಗ ಸಭೆಯಲ್ಲಿ ಇನ್ಮುಂದೆ ಶಾಸಕರಿಗೆ ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯದ ಮೂರು ಟಿಕೆಟ್ ಹಾಗೂ ಇಂಟರ್ ನ್ಯಾಷಲ್ ಮ್ಯಾಚ್ ನ ಎರಡು ಟಿಕೆಟ್ ನೀಡುವ ನಿರ್ಧಾರವಾಗಿದೆ. ಇನ್ನು ಹೆಚ್ಚು ಬೇಕಿದ್ರೆ ಖರೀದಿ ಮಾಡಿ ಎಂದು ಡಿಕೆಶಿ ಹೇಳಿದರು.
ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಮೂಲ ಸೌಕರ್ಯದ ಕುರಿತು ಮಾತುಕತೆ ನಡೆದಿದ್ದು, ಆಸನ ಹೆಚ್ಚಿಸುವ ಕುರಿತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಚಿಂತಿಸುತ್ತಿದ್ದು, ಈ ಕುರಿತು ವರದಿ ಕೇಳಿದ್ದೇನೆ ಎಂದು ತಿಳಿಸಿದರು.



