March 30, 2026
Monday, March 30, 2026
spot_img

ಏಪ್ರಿಲ್ ಮೊದಲ ವಾರದಲ್ಲೇ ಸಾಲು ಸಾಲು ರಜೆ: ಮಂಗಳೂರು, ಉಡುಪಿಯಿಂದ ಕೇರಳ, ಗೋವಾಕ್ಕೆ ಓಡಾಡಲಿದೆ ವಿಶೇಷ ರೈಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಪ್ರಿಲ್ ಮೊದಲ ವಾರದ ವಾರಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಅತಿಯಾದ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ಕೇರಳ ಮತ್ತು ಗೋವಾಕ್ಕೆ ವಿಶೇಷ ರೈಲುಗಳ ಸಂಚಾರವನ್ನು ಘೋಷಿಸಿದೆ.

ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದಿಂದ ಕೇರಳದ ಕೊಚುವೇಲಿಗೆ ವಿಶೇಷ ರೈಲು ಏಪ್ರಿಲ್ 2ರಂದು ಸಂಜೆ 6:30ಕ್ಕೆ ಹೊರಡಲಿದೆ. ಈ ರೈಲು ಸೇಲಂ ಮತ್ತು ಪಾಲಕ್ಕಾಡ್ ಮೂಲಕ ಸಂಚರಿಸಲಿದೆ. ಅದೇ ರೀತಿ, ಗೋವಾಕ್ಕೆ ತೆರಳುವ ಪ್ರವಾಸಿಗರಿಗಾಗಿ ಹುಬ್ಬಳ್ಳಿ ಮತ್ತು ಬೆಳಗಾವಿ ಮಾರ್ಗವಾಗಿ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಕೊಂಕಣ ರೈಲ್ವೆ ಮಾರ್ಗದ ಉಡುಪಿ ಮತ್ತು ಮಂಗಳೂರು ಮೂಲಕ ಹಾದುಹೋಗುವ ರೈಲುಗಳಲ್ಲಿ ಈಗಾಗಲೇ ಟಿಕೆಟ್ ಬುಕಿಂಗ್ ಭರ್ತಿಯಾಗುತ್ತಿದ್ದು, ಪ್ರಯಾಣಿಕರ ಒತ್ತಡ ಹೆಚ್ಚಿರುವ ಕಾರಣ ಈ ವಿಶೇಷ ರೈಲುಗಳು ಸಹಕಾರಿಯಾಗಲಿವೆ.

ಏ. 3 ರಂದು ಗುಡ್ ಫ್ರೈಡೆ, ಏಪ್ರಿಲ್ 4 (ಶನಿವಾರ) ಮತ್ತು ಏಪ್ರಿಲ್ 5 (ಭಾನುವಾರ) ರಜೆ ಇರುವುದರಿಂದ ಪ್ರವಾಸಿಗರು ಮತ್ತು ಊರಿಗೆ ತೆರಳುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ. ಪ್ರಯಾಣಿಕರು ಐಆರ್‌ಸಿಟಿಸಿ ಜಾಲತಾಣದ ಮೂಲಕ ಈ ವಿಶೇಷ ರೈಲುಗಳ ಸೌಲಭ್ಯ ಪಡೆಯುವಂತೆ ರೈಲ್ವೆ ಇಲಾಖೆ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !