July 11, 2026
Saturday, July 11, 2026
spot_img

ಅಫ್ಘಾನ್ ಕುನಾರ್ ಪ್ರಾಂತ್ಯದ ಮೇಲೆ ಪಾಕಿಸ್ತಾನ ಸೇನೆಯಿಂದ ಶೆಲ್ ದಾಳಿ: ಓರ್ವ ಸಾವು, 16 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯದ ಅಸದಾಬಾದ್ ಹೊರವಲಯದಲ್ಲಿ ಪಾಕಿಸ್ತಾನ ಸೇನೆ ಶೆಲ್ ದಾಳಿ ನಡೆಸಿದ್ದು, ಒಬ್ಬರು ಸಾವನ್ನಪ್ಪಿ, 16 ಮಂದಿ ಗಾಯಗೊಂಡಿದ್ದಾರೆ.


ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಅಫ್ಘಾನಿಸ್ತಾರ ಆರೋಪಿಸಿದೆ.
ಗ್ರಾಮೀಣ ಪ್ರದೇಶಗಳು ಮತ್ತು ನಾಗರಿಕರ ಮನೆಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಸೇನೆ ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂದು ಆರೋಪಿಸಿರುವ ಅಫ್ಘನ್ ಸರ್ಕಾರದ ಉಪವಕ್ತಾರ , ಹಮ್ದುಲ್ಲಾ ಫಿತರತ್ ಇತ್ತೀಚಿನ ಘಟನೆಯು ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಗಡಿಯಾಚೆಗಿನ ಘರ್ಷಣೆಗಳು ಮತ್ತು ವಾಯುದಾಳಿಗಳ ನಡುವೆ ನಡೆದಿದ್ದು, ಅಫ್ಘಾನಿಸ್ತಾನ, ಗಡಿಯಾಚೆಗಿನ ಯಾವುದೇ ದಾಳಿಯನ್ನು ನಿಗ್ರಹಿಸಲು ಸಮರ್ಥವಾಗಿದೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !