March 31, 2026
Tuesday, March 31, 2026
spot_img

Super Foods | ತೂಕ ಕಡಿಮೆ ಮಾಡುವ 5 ಸಸ್ತಾ ಸೂಪರ್ ಫುಡ್ ಇಲ್ಲಿದೆ

ತೂಕ ಇಳಿಸಿಕೊಳ್ಳಲು ದುಬಾರಿ ಡಯಟ್ ಫುಡ್ಸ್ ಅಥವಾ ಸಪ್ಲಿಮೆಂಟ್‌ಗಳು ಬೇಕೇ ಬೇಕು ಅನ್ನೋ ಅವಶ್ಯಕತೆ ಇಲ್ಲ. ನಮ್ಮ ಮನೆ ಅಡಿಗೆಮನೆಯಲ್ಲಿ ಸಿಗುವ ಕೆಲವು ಸರಳ ಮತ್ತು ಕಡಿಮೆ ರೇಟ್ ನ ಆಹಾರ ಪದಾರ್ಥಗಳೇ ವೆಯಿಟ್ ಲಾಸ್‌ಗೆ ಸಹಾಯ ಮಾಡುತ್ತವೆ. ಸರಿಯಾದ ಆಹಾರ ಆಯ್ಕೆ ಮಾಡಿದರೆ ತೂಕ ಕಡಿಮೆ ಮಾಡುವುದು ಸುಲಭವಾಗಬಹುದು.

ಓಟ್ಸ್ – ಹೊಟ್ಟೆ ತುಂಬಿದ ಭಾವನೆ ಹೆಚ್ಚು
ಓಟ್ಸ್‌ನಲ್ಲಿ ಫೈಬರ್ ಹೆಚ್ಚು ಇರುವುದರಿಂದ ಹೆಚ್ಚು ಸಮಯ ಹಸಿವು ಆಗುವುದಿಲ್ಲ. ಬೆಳಗಿನ ಉಪಹಾರಕ್ಕೆ ಇದನ್ನು ತೆಗೆದುಕೊಂಡರೆ ದಿನಪೂರ್ತಿ ಅನಗತ್ಯವಾಗಿ ತಿಂಡಿ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ.

ಹೆಸರುಬೇಳೆ – ಪ್ರೋಟೀನ್ ಪವರ್
ಹೆಸರುಬೇಳೆ ಅಥವಾ ಮೂಂಗ್ ದಾಲ್ ಪ್ರೋಟೀನ್ ಮತ್ತು ಫೈಬರ್‌ನ ಉತ್ತಮ ಮೂಲ. ಇದು ಮಸಲ್‌ಗಳನ್ನು ಬಲಪಡಿಸುವುದರ ಜೊತೆಗೆ ತೂಕ ಇಳಿಕೆಗೆ ಸಹಕಾರಿ.

ಇದನ್ನೂ ಓದಿ:

ಮೊಸರು – ಹೊಟ್ಟೆಗೆ ಬೆಸ್ಟ್
ಲೋಫ್ಯಾಟ್ ಮೊಸರು ಜೀರ್ಣಕ್ರಿಯೆ ಉತ್ತಮವಾಗಿರಲು ಸಹಾಯ ಮಾಡುತ್ತದೆ. ಇದರಲ್ಲಿ ಪ್ರೋಟೀನ್ ಕೂಡ ಇರುವುದರಿಂದ ತೂಕ ಕಡಿಮೆ ಮಾಡುವ ಡಯಟ್‌ಗೆ ಸೂಕ್ತ.

ಮೊಟ್ಟೆ – ಕಡಿಮೆ ಬೆಲೆಯ ಸೂಪರ್ ಫುಡ್
ಮೊಟ್ಟೆ ಪ್ರೋಟೀನ್ ಸಮೃದ್ಧ ಆಹಾರ. ಬೆಳಗ್ಗೆ ಮೊಟ್ಟೆ ತಿಂದರೆ ಹೆಚ್ಚು ಸಮಯ ಹೊಟ್ಟೆ ತುಂಬಿದಂತೆ ಅನುಭವವಾಗುತ್ತದೆ.

ಹಣ್ಣುಗಳು – ನೈಸರ್ಗಿಕ ಶಕ್ತಿ
ಬಾಳೆಹಣ್ಣು, ಸೇಬು ಮತ್ತು ಪಪ್ಪಾಯ ಹಣ್ಣುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಇವು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡಿ ವೆಯಿಟ್ ಲಾಸ್‌ಗೆ ಸಹಾಯ ಮಾಡುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !