September 29, 2026
Tuesday, September 29, 2026
spot_img

ಅಭಿವೃದ್ಧಿ ಹೊಂದಿದ ಅಸ್ಸಾಂ ನಿರ್ಮಿಸಲು ಈ ಚುನಾವಣೆ ಎಂದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂನಲ್ಲಿ ಸಾಕಷ್ಟು ಅಭಿವೃದ್ಧಿಗಳನ್ನು ಮಾಡಲಾಗಿದೆ. ಇದೀಗ ಮತ್ತಷ್ಟು ಮಹತ್ತರ ಅಭಿವೃದ್ಧಿಗೆ ಅಸ್ಸಾಂ ಸಜ್ಜಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೊದಲು ಸರ್ಬಾನಂದ ಸೋನೋವಾಲ್ ನಂತರ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ, ಅಸ್ಸಾಂ ಕಳೆದ 10 ವರ್ಷಗಳಲ್ಲಿ ಸೇವೆ ಮತ್ತು ಉತ್ತಮ ಆಡಳಿತದ ಹೊಸ ಯುಗಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಸ್ಸಾಂನ ಜನರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲು ಸಿದ್ಧರಾಗಿದ್ದಾರೆ. ಮುಂಬರುವ ಚುನಾವಣೆಯು ಎನ್‌ಡಿಎಗೆ ಸ್ಪಷ್ಟ ಹ್ಯಾಟ್ರಿಕ್ ನೀಡುತ್ತದೆ. ಸ್ವಯಂ ಘೋಷಿತ ರಾಜಕುಮಾರನಿಗೆ ಇದು ಹ್ಯಾಟ್ರಿಕ್ ಸೋಲು ಮತ್ತು ಶತಮಾನದ ಸೋಲು ಎಂದು ರಾಹುಲ್‌ ಗಾಂಧಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 

ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಅಭಿವೃದ್ಧಿ ಹೊಂದಿದ ಅಸ್ಸಾಂ ನಿರ್ಮಿಸುವ ಚುನಾವಣೆ ಇದಾಗಿದೆ. ಈ ಬಾರಿ ಅಸ್ಸಾಂನಲ್ಲಿ ಎನ್​ಡಿಎ ಹ್ಯಾಟ್ರಿಕ್​ಗೆ ಸಜ್ಜಾಗಿದೆ ಎಂದರು.

Must Read