July 28, 2026
Tuesday, July 28, 2026
spot_img

ಅಸ್ಸಾಂನ ಟೀ ಎಸ್ಟೇಟ್‌ನಲ್ಲಿ ಕ್ವಾಲಿಟಿ ಟೈಮ್‌ ಸ್ಪೆಂಡ್‌ ಮಾಡಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಸ್ಸಾಂ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿರುವ ಪ್ರಧಾನಿ ಮೋದಿ ಗುವಾಹಟಿ ಸಮೀಪದ ಟೀ ಎಸ್ಟೇಟ್‌ನಲ್ಲಿ ಸಮಯ ಕಳೆದಿದ್ದಾರೆ.

ದಿಬ್ರುಗಢದ ಟೀ ಗಾರ್ಡನ್‌ಗೆ ತೆರಳಿ ಟೀ ಎಲೆಗಳನ್ನು ಕಿತ್ತು ಕಾರ್ಮಿಕ ಮಹಿಳೆಯರ ಯೋಗಕ್ಷೇಮ ವಿಚಾರಣೆ ಮಾಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಡಿಬ್ರುಗಢದ ಟೀ ತೋಟಕ್ಕೆ ಭೇಟಿ ನೀಡಿ ಅಲ್ಲಿನ ಮಹಿಳಾ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಏಪ್ರಿಲ್ 9ರ ಮತದಾನಕ್ಕೆ ಮುನ್ನ, ಬಿಜೆಪಿ ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ಅವರು ಗೋಗಾಮುಖ್ ಮತ್ತು ಬಿಸ್ವನಾಥ್‌ನಲ್ಲಿ ಇಂದು ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.

ಟೀ ಅಸ್ಸಾಂನ ಆತ್ಮವಾಗಿದೆ! ಇಲ್ಲಿ ಉತ್ಪಾದನೆಯಾಗುವ ಟೀ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಇಂದು ಬೆಳಗ್ಗೆ ಡಿಬ್ರುಗಢದಲ್ಲಿ ಟೀ ತೋಟಕ್ಕೆ ಭೇಟಿ ನೀಡಿ ಮಹಿಳಾ ಕಾರ್ಮಿಕರೊಂದಿಗೆ ಮಾತನಾಡಿದ್ದು ಬಹಳ ಸ್ಮರಣೀಯ ಅನುಭವವಾಗಿತ್ತು ಎಂದು ಮೋದಿ ಪೋಸ್ಟ್‌ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !