April 1, 2026
Wednesday, April 1, 2026
spot_img

ರಾಜ್ಯದಲ್ಲಿ ಗ್ಯಾಸ್ ಕೊರತೆಯಿಂದ ಪಂಪ್ ಗಳಲ್ಲಿ ಆಟೋಗಳ ಕ್ಯೂ: ಸಚಿವ ಮುನಿಯಪ್ಪ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಾದ್ಯಂತ ಆಟೋ ಎಲ್‌ಪಿಜಿ ಕೊರತೆ ತೀವ್ರಗೊಂಡಿದ್ದು, ಇದರ ಪರಿಣಾಮ ಎಲ್‌ಪಿಜಿ ಬಂಕ್‌ಗಳಲ್ಲಿ ಆಟೋಗಳು ಸಾಲು ಸಾಲು ನಿಂತಿದ್ದು, ಚಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ​​ಮುನಿಯಪ್ಪ, ಆಟೋ ಎಲ್ ಪಿಜಿ ಸಮಸ್ಯೆ ಸದ್ಯ ಸರಕಾರಿ ಪಿಎಸ್‌ಯುಗಳಲ್ಲಿ ಇಲ್ಲ . ಆದರೆ ಕೇವಲ ಖಾಸಗಿ ತೈಲ ಕಂಪನಿಗಳ ಸೇವಾ ಕೇಂದ್ರಗಳಲ್ಲಿ ಇದೆ ಎಂದು ಹೇಳಿದರು.

ಖಾಸಗಿ ಕಂಪನಿಗಳು ಬೆಲೆ ಹೆಚ್ಚಿಸಿದ ಕಾರಣ ಈ ಸಮಸ್ಯೆ ಉಂಟಾಗಿದ್ದು, ಈ ಹಿನ್ನೆಲೆ ಖಾಸಗಿ ಕಂಪನಿಗಳ ವಿರುದ್ಧ ಕ್ರಮಕ್ಕೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !