April 1, 2026
Wednesday, April 1, 2026
spot_img

ಮಧ್ಯಪ್ರಾಚ್ಯದ ಸಂಘರ್ಷದ ನಡುವೆಯೂ 5,98,000 ಭಾರತೀಯರು ಸ್ವದೇಶಕ್ಕೆ ವಾಪಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆಯೂ ಸುಮಾರು 5,98,000 ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಸೀಮ್ ಆರ್ ಮಹಾಜನ್, ಯುದ್ಧ ಆರಂಭಗೊಂಡ ಬಳಿಕ ಭಾರತೀಯರ ರಕ್ಷಣೆ ಆದ್ಯತೆ ನೀಡಲಾಗಿದ್ದು, 5,98,000 ಪ್ರಯಾಣಿಕರು ಭಾರತಕ್ಕೆ ಮರಳಿದ್ದಾರೆ. ಇದಕ್ಕಾಗಿ ಸೌದಿ ಅರೇಬಿಯಾ ಮತ್ತು ಓಮನ್‌ನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ಕಡೆಗೆ ವಿಮಾನಗಳು ಸಂಚರಿಸಿದೆ ಎಂದು ತಿಳಿಸಿದರು.

ಸಂಘರ್ಷ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ವಿಮಾನಗಳ ಪರಿಸ್ಥಿತಿಯು ಸುಧಾರಿಸುತ್ತಿದೆ. ಕತಾರ್ ವಾಯುಪ್ರದೇಶ ಅಲ್ಪ ಪ್ರಮಾಣದಲ್ಲಿ ತೆರೆದಿದ್ದು, ಈ ಹಿನ್ನೆಲೆ ಭಾರತಕ್ಕೆ 8 ರಿಂದ 10 ವಿಮಾನಗಳನ್ನು ಬರುವ ನಿರ್ವಹಿಸುವ ನಿರೀಕ್ಷೆಯಿದೆ. ಅದೇ ರೀತಿ ಯುಎಇಯಿಂದ 90 ವಿಮಾನಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !