ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಪ್ರೀಪೇಯ್ಡ್ ವಿದ್ಯುತ್ ಮೀಟರ್ ಗಳನ್ನು ಕಡ್ಡಾಯ ಅಳವಡಿಸಿಕೊಳ್ಳಬೇಕು ಎಂಬ ಊಹಾಪೋಹಗಳನ್ನು ಕೇಂದ್ರ ಸರಕಾರ ತಳ್ಳಿಹಾಕಿದೆ.
ಈ ಕುರಿತು ಲೋಕಸಭೆಯಲ್ಲಿ ಇಂದು ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್ ಮಾಹಿತಿ ನೀಡಿದ್ದು, ಜನರಿಗೆ ಪ್ರೀಪೇಯ್ಡ್ ಮೀಟರ್ಗಳನ್ನು ಅಳವಡಿಸಿಕೊಳ್ಳಲು ಸರಕಾರ ಸೂಚಿಸಿಲ್ಲ. ಈ ಕುರಿತು ಕೇವಲ ಗಾಳಿ ಸುದ್ದಿ ಹರಿದಾಡುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿಗಳು ಇಂತಹ ಯಾವುದೇ ಸಲಹೆ ನೀಡಿಲ್ಲ. ಹಾಗಾಗಿ ಯಾವುದೇ ಆತಂಕಬೇಡ. ಸಾಮಾನ್ಯವಾಗಿ ಕೆಲವು ಗ್ರಾಹಕರು ವಿದ್ಯುತ್ ಬಳಕೆ ಮಾಡಿ ಶುಲ್ಕ ಪಾವತಿ ಮಾಡಲ್ಲ. ಅಂತಹ ಸಂದರ್ಭದಲ್ಲಿ ಹಣ ಪಾವತಿ ಮಾಡಲು ಪ್ರೀಪೇಯ್ಡ್ ಮೀಟರ್ ವಿಧಾನವು ಉತ್ತಮವಾಗಿದೆ ಎಂದು ತಿಳಿಸಿದರು.
ಪ್ರೀಪೇಯ್ಡ್ ಮೀಟರ್ ಪ್ರಯೋಜನೆ ಏನು?
ವಾಣಿಜ್ಯ,ಕೈಗಾರಿಕೆ, ಗೃಹ ಬಳಕೆ ಸೇರಿದಂತೆ ಎಲ್ಲ ಬಗೆಯ ವಿದ್ಯುತ್ ಸಂಪರ್ಕಗಳಿಗೆ ಪ್ರೀಪೇಯ್ಡ್ ಮೀಟರ್ ಅಳವಡಿಸುಕೊಳ್ಳುತ್ತಾರೆ. ಇದರಿಂದ ತಾವು ವಿದ್ಯುತ್ ಬಳಕೆ ಮಾಡುವ ಮೊದಲು ಮೊದಲೇ ಹಣವನ್ನು ಪಾವತಿಸಬೇಕು. ಇಲ್ಲಿ ಮೊಬೈಲ್ ಫೋನ್ಗಳ ಮಾದರಿಯಲ್ಲಿ ಪ್ರೀಪೇಯ್ಡ್ ರೀಚಾರ್ಜ್ ಇರಲಿದ್ದು, ಗ್ರಾಹಕರು ತಮ್ಮ ಅಗತ್ಯ ಮತ್ತು ಬಳಕೆಗೆ ಅನುಸಾರವಾಗಿ ಹಣವನ್ನು ರೀಚಾರ್ಜ್ ಮಾಡಲು ಅವಕಾಶವಿದೆ .



