September 29, 2026
Tuesday, September 29, 2026
spot_img

ಪುದುಚೇರಿ ಚುನಾವಣಾ ಅಖಾಡದಲ್ಲಿ ನಮೋ: ಪ್ರಧಾನಿ ಮೋದಿ ರೋಡ್ ಶೋ ಕಂಡು ವಿದೇಶಿಗರು ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಚುನಾವಣಾ ಕಾವು ರಂಗೇರುತ್ತಿದ್ದು, ಇಂದು ಖುದ್ದು ಅಖಾಡಕ್ಕೆ ಪ್ರಧಾನಿ ಮೋದಿ ಎಂಟ್ರಿ ನೀಡಿದ್ದು, ಭರ್ಜರಿ ರೋಡ್ ಶೋ ನಡೆಸಿದರು.

ಪುದುಚೇರಿಯ ಅಜಂತಾ ಸಿಗ್ನಲ್ ಜಂಕ್ಷನ್‌ನಿಂದ ಅಣ್ಣಾ ಸ್ಕ್ವೇರ್ ವರೆಗೆ ರೋಡ್ ಶೋ ನಡೆಸಿದ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.

ಪುದುಚೇರಿಯಲ್ಲಿ ಪ್ರಧಾನಿ ಮೋದಿ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ರಸ್ತೆಗಳ ಇಕ್ಕೆಲಗಳಲ್ಲಿ ಕಿಕ್ಕಿರಿದು ಜನ ಸೇರಿದ್ದು, ಎಲ್ಲೆಡೆ ಅದ್ದೂರಿ ಸ್ವಾಗತ ನೀಡಿದರು.

ಅದರಲ್ಲೂ ಪುದುಚೇರಿಗೆ ಆಗಮಿಸಿದ ಪ್ರವಾಸಿ ವಿದೇಶಿಗರು ಪ್ರಧಾನಿ ಮೋದಿ ಕಂಡು ಸಂಭ್ರಮಿಸಿದ್ದು, ಮೋದಿಯತ್ತ ಕೈಬೀಸಿ ಖುಷಿಪಟ್ಟರು. ಜೊತೆಗೆ ಅದ್ದೂರಿ ರೋಡ್ ಶೋ ವನ್ನು ತಮ್ಮ ಮೊಬೈಲ್ ಫೋನ್ ಸೆರೆ ಹಿಡಿದರು.

Must Read