ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬಿಗ್ ಮ್ಯಾಚ್ ನಡೆಯಲಿದ್ದು, ಈಗಾಗಲೇ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದು, ಇದರ ನಡುವೆ ಅಭಿಮಾನಿಗಳಿಗಾಗಿ ಮೆಟ್ರೋ ರೈಲುಗಳ ಸಮಯ ವಿಸ್ತರಣೆಯಾಗಿದ್ದು, ಇದೀಗ ಬಿಎಂಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಮೈದಾನದ ಕಡೆಯಿಂದ 8 ಬಸ್ಗಳು ಓಡಾಟ ನಡೆಸಲಿವೆ.
ಚಿನ್ನಸ್ವಾಮಿ ಸ್ಟೇಡಿಯಂನಿಂದ ಕಾಡುಗೋಡಿ ಬಸ್ ನಿಲ್ದಾಣ,ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಟೌನ್ಶಿಪ್, ಮಾಗಡಿ ರಸ್ತೆ, ಆರ್.ಕೆ.ಹೆಗಡೆ ನಗರ, ಯಲಹಂಕ, ಹೊಸಕೋಟೆ ಹಾಗೂ ಬನಶಂಕರಿ ಕಡೆ ಬಸ್ ಓಡಾಟ ನಡೆಸಲಿದೆ.
ಬಿಎಂಟಿಸಿ ಬಸ್ಗಳು ಸಿ.ಟಿ.ಒ ಜಂಕ್ಷನ್ನಿಂದ ಬಿ.ಆರ್.ವಿ ಜಂಕ್ಷನ್ ವರೆಗೆ ರಸ್ತೆಯ ಎಡ ಭಾಗದಲ್ಲಿ ನಿಲುಗಡೆಯಾಗಲಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.



