June 24, 2026
Wednesday, June 24, 2026
spot_img

ನೂತನ ಸಿಎಂಗೆ ರಾಜಕೀಯ ಅನುಭವ ಇದೆ, ಆದರೆ ಕೊರತೆ ಇರೋದು ಇಚ್ಛಾಶಕ್ತಿಯದ್ದು! ಸಿ.ಟಿ. ರವಿ ಟಾಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ನೂತನ ಸಿಎಂಗೆ ಅಗಾಧವಾದ ರಾಜಕೀಯ ಅನುಭವ ಇದೆ, ಹುರುಪು, ಉತ್ಸಾಹ ಇದೆ ಆದರೆ ಕೊರತೆ ಇರೋದು ಇಚ್ಛಾಶಕ್ತಿಯದ್ದು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ವೈಯಕ್ತಿಯ ರಾಜಕಾರಣ ಹಿತಾಸಕ್ತಿ ಹಾಗೂ ಪಕ್ಷದ ಹಿತಾಸಕ್ತಿಗಿಂತ ರಾಜ್ಯದ ಹಿತದ ಬಗ್ಗೆ ಆಲೋಚಿಸಿದರೆ ಮಾತ್ರ ಉತ್ತಮವಾದ ಕೆಲಸ ಮಾಡಲು ಸಾಧ್ಯ. ನಿಮ್ಮ ಆದ್ಯತೆ ಸದಾ ಜನರ ಅಭಿವೃದ್ಧಿಯಾಗಿರಲಿ. ನಿರುದ್ಯೋಗಿ ಯುವಕರಿಗೆ ಕೆಲಸ ನೀಡಿ ಎಂದಿದ್ದಾರೆ.

ಕಾಂಗ್ರೆಸ್‌ನ ಸಮಸ್ಯೆ ಒಂದೇ ಇಲ್ಲಿ ರಾಜ್ಯದ ಜನರ ಹಿತಕ್ಕಿಂತ ರಾಜಕೀಯ ಹಿತಾಸಕ್ತಿಗೆ ಮಣೆ ಹಾಕುವವರು ಹೆಚ್ಚು. ಈ ಕೆಲಸವನ್ನು ನೀವು ಮಾಡಬೇಡಿ. ಹಣವೇ ಪ್ರಧಾನ ಅಲ್ಲ, ಜನರು ಮುಖ್ಯ. ಎಚ್ಚರ ವಹಿಸಿ ಆಡಳಿತ ನಡೆಸಿ. ಹಳೆಯ ಸಿಎಂಗಳು ಮಾಡಿದ ತಪ್ಪನ್ನು ನೀವು ಮಾಡಬೇಡಿ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !