April 6, 2026
Monday, April 6, 2026
spot_img

ಕರ್ನಾಟಕದ ಯುವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಾಕುಂಭ ಮೇಳ ಖ್ಯಾತಿಯ ಐಐಟಿ ಬಾಬಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಯಾಗ್‌ರಾಜ್‌ ಮಹಾಕುಂಭದಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದ ಐಐಟಿ ಪದವೀಧರ, ಬಾಬಾ ಅಭಯ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದು, ಬೆಂಗಳೂರಿನ ಹುಡುಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಹಾಕುಂಭಮೇಳದಲ್ಲಿ ಆಧ್ಯಾತ್ಮಿಕ ಜೀವನ ಹಾಗೂ ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿಯಾಗಿ ವೈರಲ್ ಆಗಿದ್ದ ಅಭಯ್ ಸಿಂಗ್ ಬೆಂಗಳೂರು ನಿವಾಸಿ ಪ್ರತೀಕಾ ಅವರನ್ನು ವರಿಸಿದ್ದಾರೆ.

ಧರ್ಮಶಾಲಾದ ಅಂಜನ್‌ಗಢ ಪ್ರದೇಶದ ಶಿವ ದೇವಸ್ಥಾನದಲ್ಲಿ ಅಭಯ್ ಮತ್ತು ಪ್ರತೀಕಾ ಹಿಂದು ವಿಧಿವಿಧಾನಗಳ ಪ್ರಕಾರ ವಿವಾಹವಾಗಿದ್ದಾರೆ .

ಹಿಮಾಚಲ ಪ್ರದೇಶದ ಧರ್ಮಶಾಲಾ ಬಳಿಯ ಖನ್ಯಾರಾದಲ್ಲಿರುವ ಅಘಂಜರ್ ಮಹಾದೇವ್ ದೇವಸ್ಥಾನದಲ್ಲಿ ಫೆಬ್ರವರಿ 15ರಂದು ಸರಳವಾಗಿ ವಿವಾಹವಾಗಿದ್ದಾರೆ. ಫೆಬ್ರವರಿ 19ರಂದು ದಂಪತಿಯು ನ್ಯಾಯಾಲಯದಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಫೆಬ್ರವರಿಯಲ್ಲಿ ಸರಳವಾಗಿ ವಿವಾಹವಾದೆವು. ಸನಾತನ ಸಂಸ್ಕೃತಿಯ ಪ್ರಚಾರಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಉದ್ದೇಶಿಸಿದ್ದೇವೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !