April 7, 2026
Tuesday, April 7, 2026
spot_img

ಪಲ್ಯ, ಗ್ರೇವಿ & More 55 | ಬ್ರೇಕ್ ಫಾಸ್ಟ್ ಗೆ ರುಚಿಯಾದ ಮಹಾರಾಷ್ಟ್ರಿಯನ್ ಸ್ಟೈಲ್ ಶೇವ್ ಭಾಜಿ ಟ್ರೈ ಮಾಡಿ

ಪ್ರತಿದಿನದ ಅದೇ ಇಡ್ಲಿ, ದೋಸೆ, ಉಪ್ಮಾ ತಿಂದು ಸಾಕಾಗಿದೆ ಅಂದ್ರೆ ಈ ಮಹಾರಾಷ್ಟ್ರಿಯನ್ ಸ್ಟೈಲ್ ಶೇವ್ ಭಾಜಿ ಒಮ್ಮೆ ಮಾಡಿ. ಮಸಾಲೆ ಗ್ರೇವಿ ಮತ್ತು ಮೇಲಿಂದ ಹಾಕುವ ಶೇವ್ ಇದರ ವಿಶೇಷತೆ. ಬಿಸಿ ಬಿಸಿ ಪಾವ್, ರೊಟ್ಟಿ ಅಥವಾ ಚಪಾತಿಯ ಜೊತೆ ಬೆಳಗಿನ ಉಪಾಹಾರಕ್ಕೆ ಇದು ತುಂಬಾ ಸೂಪರ್ ಕಾಂಬಿನೇಷನ್.

ಬೇಕಾಗುವ ಪದಾರ್ಥಗಳು:

ಈರುಳ್ಳಿ – 2
ಟೊಮೆಟೊ – 2
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಜೀರಿಗೆ – ಅರ್ಧ ಚಮಚ
ಅರಿಶಿನ – ¼ ಚಮಚ
ಖಾರದ ಪುಡಿ – 1 ಚಮಚ
ಧನಿಯಾ ಪುಡಿ – 1 ಚಮಚ
ಗರಂ ಮಸಾಲಾ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ನೀರು – ಅಗತ್ಯವಷ್ಟು
ಶೇವ್ – 1 ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ. ನಂತರ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ.

ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸು ಹಾಕಿ ಸ್ವಲ್ಪ ಹುರಿಯಿರಿ. ನಂತರ ಟೊಮೆಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ.

ಈಗ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ಸ್ವಲ್ಪ ನೀರು ಹಾಕಿ 5–6 ನಿಮಿಷ ಕುದಿಯಲು ಬಿಡಿ.

ಸರ್ವ್ ಮಾಡುವ ಸಮಯದಲ್ಲಿ ಮೇಲಿಂದ ಶೇವ್ ಹಾಕಿ. ಇದರಿಂದ ಅದ್ಭುತ texture ಮತ್ತು ರುಚಿ ಇನ್ನಷ್ಟು ಹೆಚ್ಚುತ್ತದೆ.

ಬಿಸಿ ಬಿಸಿ ಪಾವ್, ಫುಲ್ಕಾ ಅಥವಾ ಚಪಾತಿಯ ಜೊತೆ ಬೆಳಗಿನ ಉಪಾಹಾರಕ್ಕೆ ಸರ್ವ್ ಮಾಡಿದರೆ ಮನೆಮಂದಿಗೆ ಖಂಡಿತ ಇಷ್ಟವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !